ಕಾಸರಗೋಡು: ನಗರಸಭಾ ವಾರ್ಡು ವಿಭಜನೆ ಅವೈಜ್ಞಾನಿಕ ರೀತಿಯಲ್ಲಿ ನಡೆಸಿರುವ ಬಗ್ಗೆ ಲಭಿಸಿದ ದೂರಿನನ್ವಯ ವಾರ್ಡು ವಿಭಜನೆ ಪ್ರಕ್ರಿಯೆಗೆ ಹೈಕೋರ್ಟು ತಡೆಯಾಜ್ಞೆ ವಿಧಿಸಿದೆ. ಮುಸ್ಲಿಂಲೀಗ್ ನಗರಸಭಾ ಸಮಿತಿ ಅಧ್ಯಕ್ಷಕೆ.ಎಂ ಬಶೀರ್ ನೀಡಿರುವ ದೂರಿನನ್ವಯ ನ್ಯಾಯಾಲಯ ಈ ಆದೇಶ ನೀಡಿದೆ.
ವಾರ್ಡು ವಿಭಜನೆ ಸಂದರ್ಭ ಒಂದು ಪ್ರದೇಶದ ಜನರನ್ನು ಇನ್ನೊಂದು ವಾರ್ಡಿನಲ್ಲಿ ಸೇರಿಸಿಲಾಗಿದೆ. ಅಲ್ಲದೆ ಹಲವು ವಾರ್ಡುಗಳಲ್ಲಿನ ಸ್ವಾಭಾವಿಕ ಗಡಿಗಳನ್ನು ಬಿಟ್ಟು, ಬೇರೆ ರೀತಿಯಲ್ಲಿ ಗಡಿ ನಿರ್ಣಯಿಸಲಾಗಿದೆ. ವಾರ್ಡು ವಿಭಜನೆ ಮಾನದಂಡಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಘಿತ್ತು. ದೂರು ಸ್ವೀಕರಿಸಿದ ನ್ಯಾಯಾಲಯ ಸ್ಥಳೀಯಾಡಳಿತ ಇಲಾಖೆ ಪ್ರಿನ್ಸಿಪಲ್ ಸೆಕ್ರೆಟರಿ, ರಾಜ್ಯ ಚುನಾವಣಾ ಆಯುಕ್ತರು, ಜಿಲ್ಲಾ ಚುನಾವಣಾ ಅಧಿಕಾರಿ, ನಗರಸಭಾ ಕಾರ್ಯದರ್ಶಿ, ನಗರಸಭಾ ಆಯಜ್ತರು ಸೇರಿದಂತೆ ಹಲವರಿಗೆ ನೋಟೀಸು ಜಾರಿಗೊಳಿಸಲಾಗಿದೆ. ರಿಟ್ ಪಿಟಿಶನ್ ಅಂತಿಮ ನಿರ್ಧಾರದ ನಂತರವಷ್ಟೆ ವಾರ್ಡು ವಿಭಜನೆ ವಿಜ್ಞಾಪನೆ ಹೊರಡಿಸುವಂತೆಯೂ ನ್ಯಾಯಾಲಯ ತಿಳಿಸಿದೆ.

