ಕಾಸರಗೋಡು: ಆರೋಗ್ಯ ಇಲಾಖೆ ಶೋಚನೀಯಾವಸ್ಥೆ ಬಗೆಹರಿಸುವಂತೆ ಹಾಗೂ ಸಚಿವೆ ವೀಣಾ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಕಾಸರಗೋಡು ಜನರಲ್ ಆಸ್ಪತ್ರೆ ಎದುರು ಧರಣಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 85ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಾರ್ಯಕರ್ತರು ಒಟ್ಟಾಗಿ ಆಗಮಿಸಿ ರಸ್ತೆ ತಡೆ ನಡೆಸಿರುವುದಲ್ಲದೆ, ಸಾರಿಗೆ ಅಡಚಣೆ, ಸಾರ್ವಜನಿಕರ ಸಂಚಾರಕ್ಕೆ ತಡೆಯೊಡ್ಡಿರುವ ಬಗ್ಗೆ ಈ ಕೇಸು ದಾಖಲಾಗಿದೆ. ಪಿ.ಆರ್ ಸುನಿಲ್, ಲೋಕೇಶ್ ನೋಂಡ, ಸಜೀವನ್, ಗುರುಪ್ರಸಾದ್, ಮನುಲಾಲ್ ಮೇಲತ್ತ್, ಸಾಗರ್ ಚಾತಮತ್ತ್, ಪ್ರಮಿಳಾ ಮಜಲ್, ಸತೀಶ್ಚಂದ್ರ ಭಂಡಾರಿ, ರಮೇಶ್ ಪಿ, ರವೀಂದ್ರನ್, ಪ್ರದೀಪ್ ಕುಟ್ಟಕಣಿ, ಶ್ರೀಧರ್ ಸೇರಿದಂತೆ ಹಲವರ ವಿರುದ್ಧ ಈ ಕೇಸು ದಾಖಲಾಗಿದೆ.

