ಕುಂಬಳೆ: ಸೇವೆ ಎನ್ನುವ ಪರಿಕಲ್ಪನೆ ಇಂದು ನಿನ್ನೆಯ ವಿಷಯವಲ್ಲ. ಅನಾದಿಕಾಲದಿಂದಲೂ ಅದು ನಡೆಯುತ್ತಲೇ ಇತ್ತು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸೇವಾಪ್ರಮುಖ್ ಮಂಜುನಾಥ ಕಾರ್ಲೆ ಅಭಿಪ್ರಾಯ ಪಟ್ಟಿದ್ದಾರೆ. ಸೇವೆ ಎನ್ನೋದಕ್ಕೆ ನಾನಾ ಅನ್ವರ್ಥ ನಾಮಗಳಿವೆ. ಯಾರು ಸೇವೆಯನ್ನು ಪಡೆಯಲು ಅರ್ಹರಿರುತ್ತಾರೋ ಅವರಿಗೆ ಸೇವೆ ಮಾಡಬೇಕು. ಇಲ್ಲದಿದ್ದರೆ ಅದು ಅಪಾರ್ಥಸೇವೆಯಾಗಿ ಪರಿಣಮಿಸುತ್ತದೆ ಎಂದವರು ಹೇಳಿದರು.
ಎಡನಾಡು ಕಣ್ಣೂರು ಸೇವಾಸಹಕಾರಿ ಬ್ಯಾಂಕಿನ ಸಮನ್ವಯ ಆಡಿಟೋರಿಯಂನಲ್ಲಿ ನಡೆದ ರಾಷ್ಟ್ರೀಯ ಸೇವಾ ಭಾರತಿಯ ಪುತ್ತಿಗೆ ಪಂಚಾಯತಿ ಸಮಿತಿಯ ರಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬದಿಯಡ್ಕ ಖಂಡ್ ಕಾರ್ಯವಾಹ್ ನವೀನ್ ಏಣಿಯರ್ಪು ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು. ಸೇವಾ ಭಾರತಿಯ ಜಿಲ್ಲಾ ಕಾರ್ಯದರ್ಶಿ ಪ್ರತೀಕ್ ಆಳ್ವ ಪೆರಡಾಲ ದೀಪ ಬೆಳಗಿಸಿದರು. ಇದೇ ಸಂದರ್ಭದಲ್ಲಿ ನೂತನ ಸಮಿತಿಯನ್ನು ನವೀನ್ ಘೋಷಣೆ ಮಾಡಿದರು. ಖಂಡ್ ಸೇವಾಪ್ರಮುಖ್ ಭಗತ್ ಗಣೇಶ್ ಸ್ವಾಗತಿಸಿ, ಅಪ್ಪಣ್ಣ ಸೀತಾಂಗೋಳಿ ವಂದಿಸಿದರು.




.jpg)
