ಉಪ್ಪಳ: ಇಲ್ಲಗಳ ಅಗರವಾಗಿರುವ ಪೈವಳಿಕೆ ಪಂಚಾಯತಿ ಆಡಳಿತ ಗ್ರಾಮೀಣ ಅಭಿವೃದ್ಧಿಗೆ ಅವಮಾನ, ಎಡ-ಬಲ ಒಪ್ಪಂದ ರಾಜಕೀಯದಿಂದ ಪೈವಳಿಕೆ ಪಂಚಾಯತಿ ಆಡಳಿತ ನಿಷ್ಕøಯ ಮಾತ್ರವಲ್ಲ ನಾಡಿಗೆ ಶಾಪವಾಗಿದೆ. ಯಾವುದೇ ಜನ ಪರ ಯೋಜನೆಗಳು ಜಾರಿಯಾಗುತ್ತಿಲ್ಲ, ಅಧಿಕಾರಿಗಳ ಅಭಾವದಿಂದ ಯೋಜನೆಗಳೇ ಜನತೆಗೆ ಲಭಿಸುತ್ತಿಲ್ಲ ಆಡಳಿತ ಪಕ್ಷಗಳು ಅವಧಿ ಪೂರ್ಣ ಮಾಡುವ ತವಕದಲ್ಲಿ ಕಸ ವಿಲೇವಾರಿಗೂ ಸಮಯವಿಲ್ಲವೇ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಪ್ರಶ್ನೆಸಿದರು.
ಪೈವಳಿಕೆ ಪಂಚಾಯತಿ ಬಿಜೆಪಿ ವಾರ್ಡ್ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕರ್ತರು ಬಿಜೆಪಿಯ ಆಸ್ತಿ. ಬಿಜೆಪಿ ಈ ಬಾರಿ ಶಕ್ತಿಯುತವಾಗಿ ಸಂಘಟಿತಗೊಂಡು ತ್ರಿಸ್ತರ ಚುನಾವಣೆ ಎದುರಿಸಲಿದೆ ಎಂದು ಹೇಳಿದರು.
ಬಿಜೆಪಿಯ ವಿಚಾರಗಳನ್ನು ಮಾತುಕತೆ ಮೂಲಕ ಪರಿಹರಿಸಲಾಗಿದೆ. ಕೆ.ಪಿ. ಪ್ರಶಾಂತ್ ಅವರನ್ನು ಮಂಡಲ ಸದಸ್ಯರಾಗಿ ಮುಂದುವರಿಸಲು ಪಕ್ಷ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಸುಬ್ರಮಣ್ಯ ಭಟ್, ಪ್ರಸಾದ್ ರೈ, ಚಂದ್ರವತಿ ಶೆಟ್ಟಿ, ಜಯಲಕ್ಷ್ಮಿ ಭಟ್, ಜಯಶಂಕರ ಮುನ್ನೂರು, ಕೀರ್ತಿ ಭಟ್, ಗಣೇಶ ಪ್ರಸಾದ ಚೇರಾಲು, ಸದಾನಂದ ಹಾಗೂ ವಾರ್ಡ್ ಪ್ರಮುಖರು ಉಪಸ್ಥಿತರಿದ್ದರು. ಸತ್ಯಶಂಕರ ಭಟ್ ಸ್ವಾಗತಿಸಿ, ವಂದಿಸಿದರು.





