ಕಾಸರಗೋಡು: 'ಎಲ್ಲರಿಗೂ ಭೂಮಿ ಮತ್ತು ಎಲ್ಲರಿಗೂ ಹಕ್ಕುಪತ್ರ'ಎಂಬ ಪರಿಕಲ್ಪನೆಯ ಆಧಾರದ ಮೇಲೆ ಕೇರಳ ಸರ್ಕಾರ ಜಾರಿಗೆ ತಂದಿರುವ ಡಿಜಿಟಲ್ ಸಮೀಕ್ಷೆ ದೇಶಕ್ಕೆ ಮಾದರಿಯಾಗಿರರುವುದಾಗಿ ಕಂದಾಯ ಮತ್ತು ವಸತಿ ಸಚಿವ ಕೆ. ರಾಜನ್ ಹೇಳಿದರು. ಅವರು ಸರ್ಕಾರದ ಯೋಜನಾ ನಿಧಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೋಡೋತ್ ಸ್ಮಾರ್ಟ್ ವಿಲೇಜ್ ಕಚೇರಿಯನ್ನು ಆನ್‍ಲೈನ್ ಮೂಲಕ ರಾಷ್ಟ್ರಕ್ಕೆ ಅರ್ಪಿಸಿದ ನಂತರ ಅವರು ಮಾತನಾಡುತ್ತಿದ್ದರು.
ಕೇರಳದಲ್ಲಿ ಒಂದೂವರೆ ವರ್ಷದಲ್ಲಿ ಡಿಜಿಟಲ್ ಸಮೀಕ್ಷೆಯ ಮೂಲಕ ನಾಲ್ಕೂವರೆ ಲಕ್ಷ ಹೆಕ್ಟೇರ್ ಭೂಮಿಯನ್ನು ಸರ್ವೇ ಮಾಡಲಾಗಿದೆ. ರಾಜ್ಯದ ಎಲ್ಲಾ 140 ವಿಧಾನಸಭಾ ಕ್ಷೇತ್ರಗಳಲ್ಲಿಕಂದಾಯ ಇಲಾಖೆಯು ಒಂಬತ್ತು ವರ್ಷಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿರುವ ಹಕ್ಕುಪತ್ರ ಅದಾಲತ್‍ಗಳ ಮೂಲಕ ನಾಲ್ಕು ಲಕ್ಷಕ್ಕೂ ಹೆಚ್ಚು ಭೂಮಾಲೀಕರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಿದೆ. ಸೇವೆಗಳನ್ನು ಹೆಚ್ಚು ಡಿಜಿಟಲ್ ಹಾಗೂ ತ್ವರಿತಗೊಳಿಸುವ ನಿಟ್ಟಿನಲ್ಲಿ ಕೇರಳದ ಸುಮಾರು 600 ಗ್ರಾಮ ಕಚೇರಿಗಳನ್ನು ಸ್ಮಾರ್ಟ್ ಗ್ರಾಮಗಳಾಗಿ ಪರಿವರ್ತಿಸಲಾಗುತ್ತಿದೆ. ಇದರ ಭಾಗವಾಗಿ, ಈ ಹಿಂದೆ ಕಂದಾಯ ಕಚೇರಿಗಳಿಂದ ಪಡೆಯಬೇಕಾಗಿದ್ದ ಸುಮಾರು 14 ದಾಖಲೆಗಳನ್ನು ಒಂದೇ ಚಿಪ್‍ನಲ್ಲಿ ಒಳವಡಿಸಿ ಸರ್ಕಾರಿ ಸೇವೆಗಳನ್ನು ಕಂದಾಯ ಕಾರ್ಡ್‍ಗಳ ರೂಪದಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಕೋಡೋತ್‍ನ;;ಇ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಇ.ಚಂದ್ರಶೇಖರನ್ ಅವರು ನೂತನ ಕಟ್ಟಡದ ಶಿಲಾಫಲಕ ಅನಾವರಣಗೊಳಿಸಿದರು. ನಿರ್ಮಿತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಇ.ಪಿ. ರಾಜಮೋಹನ್ ವರದಿ ಮಂಡಿಸಿದರು.
ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ, ಕೋಡೋಂ ಬೇಲೂರು ಗ್ರಾ.ಪಂಅಧ್ಯಕ್ಷೆ ಪಿ.ಶ್ರೀಜಾ, ಜಿಲ್ಲಾ ಪಂಚಾಯಿತಿ ಸದಸ್ಯ ಶಿನೋಜ್ ಚಾಕೋ, ಬ್ಲಾಕ್ ಪಂಚಾಯಿತಿ ಸದಸ್ಯ ಪಿ.ವಿ. ಶ್ರೀಲತಾ, ಕೋಡೋಂಬೇಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಾಮೋದರನ್, ವಾರ್ಡ್ ಸದಸ್ಯರಾದ ಪಿ.ಕುಞÂಕೃಷ್ಣನ್Àೂರ್ಯ ಗೋಪಾಲನ್, ಆನ್ಸಿ ಜೋಸೆಫ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಂಞಂಗಾಡ್ ಪ್ರಭಾರ ಆರ್‍ಡಿಓ, ಸಹಾಐಕ ಜಿಲ್ಲಾಧಿಕಾರಿ ಲಿಪು ಎಸ್. ಲಾರೆನ್ಸ್ ಸ್ವಾಗತಿಸಿದರು. ವೆಳ್ಳರಿಕುಂಡು ತಾಲ್ಲೂಕು ತಹಶೀಲ್ದಾರ್ ಪಿ.ವಿ. ಮುರಳಿ ವಂದಿಸಿದರು.





