ತಿರುವನಂತಪುರಂ: ಅಧಿಕೃತ ಪೋಲೀಸ್ ವೈರ್‍ಲೆಸ್ ಸಂದೇಶವನ್ನು ಸೋರಿಕೆ ಮಾಡಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಯೂಟ್ಯೂಬ್ ಚಾನೆಲ್ ಮಾಲೀಕ ಶಾಜನ್ ಸ್ಕರಿಯ(ಮರುನಾಡನ್ ಮಲೆಯಾಳಿ ಚಾನಲ್) ವಿರುದ್ಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ದೇಶದ್ರೋಹದ ಆರೋಪವನ್ನು ತನಿಖೆ ಮಾಡಲಾಗುವುದು.
ಪೋಲೀಸರು ಆರೋಪಪಟ್ಟಿ ಸಲ್ಲಿಸಲು ವಿಫಲವಾದ ನಂತರ ಎರ್ನಾಕುಳಂ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಬಂದಿದೆ. ಈ ಪ್ರಕರಣವನ್ನು ಪಲಾರಿವಟ್ಟಂ ಪೋಲೀಸರು ದಾಖಲಿಸಿದ್ದಾರೆ.
ಪೋಲೀಸ್ ವೈರ್‍ಲೆಸ್ ಸೆಟ್ ಅನ್ನು ಹ್ಯಾಕ್ ಮಾಡಿ, ಸಂದೇಶಗಳನ್ನು ಸೋರಿಕೆ ಮಾಡಿ ಮತ್ತು ಅವುಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಹರಡಿದ್ದಕ್ಕಾಗಿ ಪಲಾರಿವಟ್ಟಂ ಪೆÇಲೀಸರು ಶಾಜನ್ ಸ್ಕರಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಕೀಲ ಮುಹಮ್ಮದ್ ಫಿರೋಜ್ ಅವರು ದೂರು ದಾಖಲಿಸಿದ್ದಾರೆ. ಅವರ ಮೇಲೆ ಐಟಿ ಕಾಯ್ದೆ ಮತ್ತು ದೇಶದ್ರೋಹದ ಆರೋಪ ಹೊರಿಸಲಾಗಿತ್ತು. ಆದಾಗ್ಯೂ, ಪ್ರಕರಣ ದಾಖಲಿಸಿ 500 ದಿನಗಳ ನಂತರವೂ, ಪಲಾರಿವಟ್ಟಂ ಪೆÇಲೀಸರು ಇನ್ನೂ ಆರೋಪಪಟ್ಟಿ ಸಲ್ಲಿಸಿರಲಿಲ್ಲ. ದೂರುದಾರರು ಪೆÇಲೀಸರ ಲೋಪಗಳನ್ನು ಉಲ್ಲೇಖಿಸಿ ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಿದಾಗ ಪ್ರಕರಣದಲ್ಲಿ ಹೊಸ ಬೆಳವಣಿಗೆ ಕಂಡುಬಂದಿದೆ.
ವೈಜ್ಞಾನಿಕ ಪುರಾವೆಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಎಂದು ಪೋಲೀಸರು ನ್ಯಾಯಾಲಯದಲ್ಲಿ ಉತ್ತರಿಸಿದರು. ಹೊಸ ಆದೇಶದ ಪ್ರಕಾರ, ತನಿಖೆಯ ಪ್ರಗತಿಯನ್ನು ಪ್ರತಿ 30 ದಿನಗಳಿಗೊಮ್ಮೆ ವರದಿಯಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪ್ರಕರಣದಲ್ಲಿ ಒಟ್ಟು 11 ಆರೋಪಿಗಳಿದ್ದಾರೆ.





