ಮಂಜೇಶ್ವರ: ಕೊಡ್ಲಮೊಗರು ಶ್ರೀವಾಣೀ ವಿಜಯ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ನಡೆಯಿತು.
2025-26ನೇ ಶೈ ಕ್ಷಣಿಕ ವರ್ಷದ ಶಾಲಾ ಕಾರ್ಯಕಲಾಪಗಳ ವಾರ್ಷಿಕ ವರದಿಯನ್ನು ಸ್ವಾತಿ ಟೀಚರ್ ಮತ್ತು ಶ್ರುತಿ ಟೀಚರ್ ವಾಚಿಸಿದರು. ಆಯವ್ಯಯ ಮಂಡನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಬಿ ಮಂಡಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಅಬ್ದುಲ್ ಮಜೀದ್.ಟಿ, ಉಪಾಧ್ಯಕ್ಷರಾಗಿ ಮೋಹನ್ ಮಾಸ್ತರ್ ಮತ್ತು ಎಂ. ಪಿ. ಟಿ. ಎ ಅಧ್ಯಕ್ಷೆಯಗಿ ಪ್ರತಿಭಾ ಟೀಚರ್ ಹಾಗೂ ಉಪಾಧ್ಯಕ್ಷ ರೇಷ್ಮಾ ಆಯ್ಕೆಯಾದರು. ಪ್ರಾಂಶುಪಾಲ ವಿಜಯ ಕುಮಾರ್ ಸ್ವಾಗತಿಸಿ, ಬಾಲಚಂದ್ರ ವಂದಿಸಿದರು. ಮಧು ಶ್ಯಾಮ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ಅಧ್ಯಾಪಕೇತರ ಸಿಬಂದಿಗಳು ಉಪಸ್ಥಿತರಿದ್ದರು.

.jpg)
