HEALTH TIPS

ಕನ್ನಡ ಕಟ್ಟುವ ಕಟ್ಟಾಳುಗಳನ್ನು ಜೋಡಿಸುವುದೇ ಕನ್ನಡ ಜಾಗೃತಿ ಅಭಿಯಾನದ ಉದ್ದೇಶ-ಡಾ. ವಾಮನ್ ರಾವ್ ಬೇಕಲ್

ಕಾಸರಗೋಡು: ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕನ್ನಡದ ಕಟ್ಟಾಳುಗಳನ್ನು ಪರಸ್ಪರ ಜೋಡಿಸುವುದೇ "ಮನೆ ಮನೆ -ಕನ್ನಡ ಜಾಗೃತಿ ಅಭಿಯಾನದ ಪ್ರದಾನ ಉದ್ದೇಶ ಎಂದು ಕನ್ನಡ ಭವನ ಮತ್ತು ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರಾದ ಡಾ. ವಾಮನ್ ಬೇಕಲ್ ತಿಳಿಸಿದ್ದಾರೆ. 

ಅವರು ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮತ್ತು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಕೊಳಚಪ್ಪೆ ಡಾ. ಗೋವಿಂದ ಭಟ್ ಅವರ ಮಂಗಳೂರಿನ ನಿವಾಸದಲ್ಲಿ ನಡೆದ  "ಮನೆ ಮನೆ -ಕನ್ನಡ ಜಾಗೃತಿ ಅಭಿಯಾನದ ದ್ವಿತೀಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಪ್ರಜ್ಞೆ ಹೊಸ ತಲೆಮಾರಿನಲ್ಲಿ ಬೆರೂರುವಂತೆ ಮಾಡುವ ಪ್ರಯತ್ನಕ್ಕೆ, ಕವಿಗಳು, ಸಾಹಿತಿಗಳು, ಕಲಾವಿದರು, ಸಂಘಟಕರು ಒಂದಾಗಿ ಸೇರಿ ಚರ್ಚಿಸುವ ವೇದಿಕೆ ನಿರ್ಮಾಣವಾಗಬೇಕು ಎಂದು ತಿಳಿಸಿದರು.

ಸಾಹಿತಿ ಪ್ರಕಾಶಕ ಕಲ್ಲಚ್ಚು ಮಹೇಶ್ ಆರ್ ನಾಯಕ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ, ಡಾ. ವಸಂತ್ ಕುಮಾರ್ ಪೆರ್ಲ, ಕಥಾಬಿಂದು ಪ್ರಕಾಶನದ ರೂವಾರಿ ಪಿ. ವಿ. ಪ್ರದೀಪ್ ಕುಮಾರ್, ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆ, ಸಾಹಿತಿ ವೈದ್ಯ ಡಾ. ಸುರೇಶ್ ನೆಗಳಗುಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಈ ಸಂದರ್ಭ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬಿ. ಕೆ. ಮಾದವ ರಾವ್,"ಸೊಗಸು "ಪುಸ್ತಕ ಬಹುಮಾನಕ್ಕೆ ಭಾಜನರಾದ ಪಿ. ವಿ. ಪ್ರದೀಪ್ ಕುಮಾರ್ ಹಾಗೂ ಇತ್ತೀಚಿಗೆ ಆಕಾಶವಾಣಿ ಯಿಂದ ನಿವೃತ್ತಿ ಹೊಂದಿದ ಡೆಪ್ಯೂಟಿ ಡೈರೆಕ್ಟರ್ ಪಿ. ಸೂರ್ಯನಾರಾಯಣ್ ಭಟ್ ಇವರಿಗೆ ಪರಿಷತ್ತಿನ "ದಕ್ಷಿಣ ಕನ್ನಡ ಜಿಲ್ಲಾ ಸಾಧಕ ಶ್ರೀ ಪ್ರಶಸ್ತಿ 2025'ನೀಡಿ ಗೌರವಿಸಲಾಯಿತು. 

ಕಾರ್ಯಕ್ರಮದಂಗವಾಗಿ ಆಯೋಜಿಸಿದ್ದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ, ವೈದ್ಯ ಡಾ. ಸುರೇಶ್ ನೆಗಳಗುಳಿ ವಹಿಸಿದರು.  ಪ್ರಸಿದ್ಧ ಗಾಯಕಿ ಪ್ರತಿಭಾ ಸಾಲ್ಯಾನ್, ಅನಿತಾ ಶೆಣೈ, ಗ್ರೇಗೋರಿ ತಂಡ ಗಾಯನ ಮನರಂಜನಾ ಕಾರ್ಯಕ್ರಮ ನಡೆಸಿ ಕೊಟ್ಟರು.  ಕಾರ್ಯಕ್ರಮ ಸಂಯೋಜಕರಾದ ಡಾ. ಕೊಲಚಪ್ಪೆ ಗೋವಿಂದ ಭಟ್ ಸ್ವಾಗತಿಸಿದರು. ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಕು. ಅಪೂರ್ವ ಕಾರಂತ್ ಪುತ್ತೂರು ಮತ್ತು ಶೀಮತಿ ಕಸ್ತೂರಿ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.  ಹಿರಿಯ ಸಾಹಿತಿ ಬಿ. ಸತ್ಯವತಿ ಭಟ್ ಕೊಳಚಪ್ಪು ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries