ತಿರುವನಂತಪುರಂ: ಕೇರಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರನ್ನು ಉಪಕುಲಪತಿ ಅಮಾನತುಗೊಳಿಸಿರುವುದನ್ನು ವಿರೋಧಿಸಿ ರಾಜಭವನಕ್ಕೆ ಡಿವೈಎಫ್.ಐ ಮತ್ತು ಎಸ್.ಎಫ್.ಐ. ನಿನ್ನೆ ರಾತ್ರಿ ಭಾರೀ ಮುತ್ತಿಗೆ ಪ್ರತಿಭಟನೆ ನಡೆಸಿತು.
ವೆಲ್ಲಯಂಬಲಂನಲ್ಲಿ ಪೋಲೀಸರು ಬ್ಯಾರಿಕೇಡ್ ಹಾಕಿ ಕಾರ್ಯಕರ್ತರನ್ನು ತಡೆದರು. ಆದರೆ ಎಸ್.ಎಫ್.ಐ. ಕಾರ್ಯಕರ್ತರು ಬ್ಯಾರಿಕೇಡ್ ದಾಟಿ ಮುಂದೆ ಸಾಗಿದರು.
ಪೋಲೀಸರು ಎರಡು ಬಾರಿ ಜಲಫಿರಂಗಿ ಬಳಸಿದರು, ಆದರೆ ಕಾರ್ಯಕರ್ತರು ಹಿಂದೆ ಸರಿಯಲಿಲ್ಲ. ಪೋಲೀಸರು ಮತ್ತು ಎಸ್.ಎಫ್.ಐ. ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ರಾಜ್ಯಪಾಲರು ದೆಹಲಿಗೆ ತೆರಳಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಯಿತು. ಆರ್.ಎಸ್.ಎಸ್. ವಿರುದ್ಧವೂ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಯಿತು.
ರಾಜಭವನದ ಮುಖ್ಯ ದ್ವಾರದಿಂದ 30 ಮೀಟರ್ ದೂರದಲ್ಲಿ ಘರ್ಷಣೆ-ತಳ್ಳಾಟ ನಡೆದಿದೆ. ಸ್ಥಳದಲ್ಲಿ ದೊಡ್ಡ ಪೆÇಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು. ಡಿವೈಎಫ್.ಐ ಕಾರ್ಯಕರ್ತರು ಹೊರಟುಹೋದ ನಂತರ, ಎಸ್.ಎಫ್.ಐ. ಕಾರ್ಯಕರ್ತರು ಪ್ರತಿಭಟನೆಗೆ ಆಗಮಿಸಿದರು. ಪೋಲೀಸ್ ಬ್ಯಾರಿಕೇಡ್ ದಾಟಲು ಪ್ರಯತ್ನಿಸಿದ ಕಾರ್ಯಕರ್ತರ ಮೇಲೆ ಪೆÇಲೀಸರು ಜಲಫಿರಂಗಿ ಪ್ರಯೋಗಿಸಿದರು.





