ಮಂಜೇಶ್ವರ: ಖ್ಯಾತ ಉದ್ಯಮಿ, ಕೊಡುಗೈ ದಾನಿ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿ ಅವರ ಕನಸಿನ ಕೂಸಾದ ಉಚಿತ ಆರೋಗ್ಯ ವಿಮೆ/ ಅಪಘಾತ ವಿಮೆಯ ಯೋಜನೆಯ ಅಪಘಾತ ವಿಮಾ ಪಾಲಿಸಿ ವಿತರಣೆ ಚಿಗುರುಪಾದೆಯ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಸಮಿತಿಯ ಕಚೇರಿಯಲ್ಲಿ ಜರಗಿತು. ಡಾ. ಸದಾಶಿವ ಶೆಟ್ಟಿ ವಿಮಾ ಪಾಳಿಸಿಯನ್ನು ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ಪೆÇೀಸ್ಟಲ್ ಪೇಮೆಂಟ್ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಮಾನಸ್ ಜಾರ್ಜ್, ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಸದಾಶಿವ ಶೆಟ್ಟಿ ಸೇವಾ ಬಳಗದ ಉಪಾಧ್ಯಕ್ಷ ನಾರಾಯಣ ನಾಯ್ಕ್ ನಡುಹಿತ್ಲು, ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ, ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲ್, ಲೀಲಾಕ್ಷ ಕರ್ಕೇರ, ಸಂಯೋಜಕರಾದ ಕದ್ರಿ ನವನೀತ್ ಶೆಟ್ಟಿ, ಸದಸ್ಯರಾದ ಅಬ್ದುಲ್ ಮಜೀದ್ ಸಾಹೇಬ್, ಸುಬ್ಬಣ್ಣ ಆಳ್ವ, ಜಯಲಕ್ಷ್ಮಿ ಆರ್ ಶೆಟ್ಟಿ, ಪ್ರಮೋದ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬಾಯಾರು, ರವೀಂದ್ರ ಬೆರಿಪದವು, ಕೃಷ್ಣಮೂರ್ತಿ, ರಾಕೇಶ್ ಹಾಗೂ ಪೆÇೀಸ್ಟ್ ಆಫೀಸ್ ಸಿಬ್ಬಂದಿ, ಫಲಾನುಭವಿಗಳು ಉಪಸ್ಥಿತರಿದ್ದರು.





