ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ 5 ನೇ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಕಾಸರಗೋಡು ವಲಯ ಸಮಿತಿಯ ವತಿಯಿಂದ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಎಡನೀರು ಮಠಕ್ಕೆ ಸಮರ್ಪಿಸಲಾಯಿತು.
ಕಾಸರಗೋಡು ವಲಯ ಸಮಿತಿ ರಕ್ಷಾಧಿಕಾರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ.ಎನ್ ರಾಮಕೃಷ್ಣ ಹೊಳ್ಳ,ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು, ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್, ಕೆ.ವಿ.ತಿರುಮಲೇಶ ಹೊಳ್ಳ, ಕೆ.ವಿ.ಶೇಷಾದ್ರಿ ಹೊಳ್ಳ ಕೋಶಾಧಿಕಾರಿ ಗುರುಪ್ರಸಾದ್ ಕೋಟೆಕಣಿ, ಸೂರ್ಯಕಾಂತಿ, ಶ್ರೀಲತಾ ಟೀಚರ್, ರೂಪಕಲಾ ಹೊಳ್ಳ ಹಾಗೂ ವಲಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಮಠದಲ್ಲಿ ಬೆಳಗ್ಗೆ ಶ್ರೀಕೋಮರಾಡಿ ದೈವಸ್ಥಾನ ಭಜನಾಸಂಘ, ಪೇಟೆ ಶ್ರೀ ವೆಂಕಟ್ರಮಣ ಸ್ವಾಮಿ ಮಹಿಳಾ ಭಜನಾಮಂಡಳಿಯಿಂದ ಭಜನೆ, ಶ್ರೀ ವೆಂಕಟ್ರಮಣ ಬಾಲಗೋಕುಲ ಮಕ್ಕಳಿಂದ ಕುಣಿತ ಭಜನೆ, ಹರಿದಾಸ ದಯಾನಂದ ಹೊಸದುರ್ಗ ಅವರಿಂದ ಹರಿಕಥೆ ನಡೆಯಿತು.





