ಕಾಸರಗೋಡು: ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗವು ಜುಲೈ 29 ಮತ್ತು 30 ರಂದು ಬೆಳಿಗ್ಗೆ 10.30 ರಿಂದ ಕಾಸರಗೋಡು ಜಿಲ್ಲೆಯಲ್ಲಿ ಕುಂದುಕೊರತೆ ಪರಿಹಾರ ಅದಾಲತ್ ನಡೆಸಲಿದೆ. ಕಾಸರಗೋಡು ನಗರಸಭೆಯ ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಅದಾಲತ್ ನಡೆಯಲಿದೆ. ಜುಲೈ 31 ರಂದು ಉನ್ನತಿ(ಕಾಲನಿ)ಗೆ ಭೇಟಿ ನೀಡುವ ಕಾರ್ಯಕ್ರಮವೂ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.




