ಕುಂಬಳೆ: ಕೇರಳ ರಾಜ್ಯದ ಹತ್ತನೆಯ ತರಗತಿಯ ಈ ಸಾಲಲ್ಲಿ ನವೀಕರಿಸಲಾದ ಕನ್ನಡ ಉಪ ಪಠ್ಯ ಪುಸ್ತಕದಲ್ಲಿ ಖ್ಯಾತ ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರ "ಬೇರುಗಳು ಅಮ್ಮನ ಹಾಗೆ" ಎಂಬ ಕವಿತೆ ಸ್ವೀಕೃತಗೊಂಡಿದೆ.
ಭೂಮಿ ಪ್ರತಿಷ್ಠಾನ ಧಾರವಾಡ (ರಿ) ಮತ್ತು ಅರವಳದ ಪ್ರತಿಷ್ಠಾನ ಸತ್ತೂರು (ರಿ) ದಿ.ಯಲ್ಲಪ್ಪ ಅರವಳದ ಸ್ಮರಣಾರ್ಥ ಜಂಟಿಯಾಗಿ ಕೊಡುವ "ಟಾಪ್ ಟೆನ್ ಕೃತಿ ಪುರಸ್ಕಾರ" ಪಡೆದ ಶ್ರೀಕೃಷ್ಣಯ್ಯ ಅನಂತಪುರ ಅವರ "ಬೇರುಗಳು ಅಮ್ಮನ ಹಾಗೆ" ಕವನ ಸಂಕಲನದಿಂದ ಈ ಕವಿತೆಯನ್ನು ಆರಿಸಲಾಗಿದೆ.
ಶ್ರೀಕೃಷ್ಣಯ್ಯ ಅನಂತಪುರ ಅವರು ಕಾಸರಗೋಡಿನ ಖ್ಯಾತ ಹಿರಿಯ ಕವಿಗಳು. ಹಿರಿಯ ಪತ್ರಕರ್ತ ದಿ.ಡೆ.ಈಶ್ವರಯ್ಯ ಅವರ ಸಹೋದರರಾದ ಶ್ರೀಕೃಷ್ಣಯ್ಯ ಅವರ ಹಲವು ಕವನಗಳು ಆಕಾಶವಾಣಿ ಸಹಿತ ವಿವಿಧೆಡೆ ಪ್ರಸಾರಗೊಂಡಿದೆ. ಮೂರು ದಶಕಗಳ ಹಿಂದೆಯೂ ಕೇರಳ ಪಠ್ಯದಲ್ಲಿ ಅವರ ಕವನ ಪಠ್ಯವಾಗಿತ್ತು.





