ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕ/ನಾಯಕಿಯ ಆಯ್ಕೆ ಹಾಗೂ ಪಾರ್ಲಿಮೆಂಟ್ ರೂಪಿಕರಣ ಯಂ.ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಸೋಮವಾರ ಜರಗಿತು. 10 ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಯಾದ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಇವರಿಗೆ ನಾಮಪತ್ರ ಸಲ್ಲಿಸಿದರು. ಜುಲೈ 21 ರಂದು ವಿದ್ಯಾರ್ಥಿಗಳು ಇ.ವಿ.ಎಂ ಆಪ್ ಮುಖಾಂತರ ಮತದಾನ ಮಾಡುವ ಮೂಲಕ ಆಧುನಿಕ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ನ ಮತದಾನದ ರೀತಿಯನ್ನು ತಿಳಿದುಕೊಂಡರು.
ಒಟ್ಟು 421 ವಿದ್ಯಾರ್ಥಿಗಳು ಮತ ಚಲಾಯಿಸಿದರು. 7 ನೇ ತರಗತಿಯ ವಿದ್ಯಾರ್ಥಿಗಳಾದ ಮೊಹಮ್ಮದ್ ಹಸನ್ ಅನ್ಸಾಮ್ ಶಾಲಾ ನಾಯಕನಾಗಿ ಹಾಗೂ ಮನವಿಷ್ಣು ಉಪನಾಯಕನಾಗಿ ಆಯ್ಕೆಗೊಂಡರು. ದೈಹಿಕ ಶಿಕ್ಷಕ ಎಸ್. ಎಸ್.ಪ್ರಸಾದ್, ಅಧ್ಯಾಪಕರಾದ ವಿಘ್ನೇಶ್.ಎಸ್ ಹಾಗೂ ಸಮಾಜ ವಿಜ್ಞಾನ ಕ್ಲಬ್ ನ ಅಧ್ಯಾಪಕರು ಚುನಾವಣೆಯ ನೇತೃತ್ವ ವಹಿಸಿದ್ದರು.




.jpg)
.jpg)
