ಮಂಜೇಶ್ವರ: ಯಕ್ಷಬಳಗ ಹೊಸಂಗಡಿ ಇದರ 34. ನೇ ವರ್ಷದ ಆಷಾಡಮಾಸದ ಸರಣಿ ಯಕ್ಷಗಾನ ತಾಳಮದ್ದಳೆಯ ಉದ್ಘಾಟನೆ ಕಳಿಯೂರು ಶ್ರೀ ರಕ್ತೇಶ್ವರಿ ದೈವಕ್ಷೇತ್ರದಲ್ಲಿ ಜರಗಿತು.
ನಿವೃತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯಕ್ಷಬಳಗದ ಅಧ್ಯಕ್ಷ ಸತೀಶ ಅಡಪ ಸಂಕಬೈಲು, ಕಾರ್ಯದರ್ಶಿ ನಾಗರಾಜ ಪದಕಣ್ಣಾಯ ಮೂಡಂಬೈಲು, ಸದಾಶಿವ ಕಳಿಯೂರು ಮುಂತಾದವರು ಉಪಸ್ಥಿತರಿದ್ದರು. ಬಳಿಕ ಭೀಷ್ಮ ಪ್ರತಿಜ್ಞೆ ತಾಳಮದ್ದಳೆ ಪ್ರಸ್ತುತಿಗೊಂಡಿತು.




.jpg)
