ಪೆರ್ಲ: ಮಂಗಳೂರು ವಿವಿಯ ಸಂಧ್ಯಾ ಕಾಲೇಜು ತುಳು ಸ್ನಾತಕೊತ್ತರ ಅಧ್ಯಯನ ಕೇಂದ್ರದಲ್ಲಿ 2024-25ನೇ ಸಾಲಿನ ಅಂತಿಮ ವರ್ಷದ ತುಳು ಎಂಎ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಪಡ್ರೆ, ಪೆರಿಕ್ಕಾನದ ಸಂಶೋಧಕ, ವಿಜ್ಞಾನ ಮಾದರಿ ವಿನ್ಯಾಸಗಾರ ಪ್ರವೀಣ್ ಭಟ್ "ತುಳುನಾಡ್ದ ಕರ್‍ಹಾಡ ಬ್ರಾಣೆರ್ ನಕ್ಲೆನ ಸಮುದಾಯೊದ ಸಾಂಸ್ಕøತಿಕ ಅಧ್ಯಯನೊ" ವಿಷಯದಲ್ಲಿ ಸಂಪ್ರಬಂಧ ಮಂಡಿಸಿದರು.
ಕಾಲೇಜಿನ ತುಳು ವಿಭಾಗದ ಉಪನ್ಯಾಸಕಿ ಜಯಲಕ್ಷಿ ಆರ್.ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗಕ್ಕೆ ಸಂಶೋಧನಾ ಪ್ರಬಂಧ ಮಂಡಿಸಿ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಮೂಲಕ ವಿವಿಗೆ ಸಲ್ಲಿಸಿದ್ದಾರೆ. ಹಿರಿಯ ಪ್ರಾಧ್ಯಾಪಕ ಡಾ.ಜಯವಂತ ನಾಯಕ್ ಉಪಸ್ಥಿತರಿದ್ದರು.




.jpg)
