ಕೊಚ್ಚಿ: ಆರ್‍ಎಸ್‍ಎಸ್ ಸರ ಸಂಘಚಾಲಕ್ ಮೋಹನ್ ಭಾಗವತ್ ಅವರು ಶಿಕ್ಷಾ ಸಂಸ್ಕøತಿ ಉತ್ಥಾನ್ ನ್ಯಾಸ್ ರಾಷ್ಟ್ರೀಯ ಶಿಕ್ಷಣ ಸಮ್ಮೇಳನದಲ್ಲಿ ಭಾಗವಹಿಸಲು ಕೊಚ್ಚಿಗೆ ಆಗಮಿಸಿದ್ದಾರೆ. ನಿನ್ನೆ ರಾತ್ರಿ 7.30ಕ್ಕೆ ನೆಡುಂಬಶ್ಶೇರಿಯಲ್ಲಿ ಬಂದಿಳಿದರು.
ಸರ ಸಂಘಚಾಲಕರಿಗೆ ಹೃತ್ಪೂರ್ವಕ ಸ್ವಾಗತ ನೀಡಲಾಯಿತು. ಆರ್‍ಎಸ್‍ಎಸ್ ಕ್ಷೇತ್ರೀಯ ಪ್ರಚಾರಕ ಪಿ.ಎನ್. ಹರಿಕೃಷ್ಣಕುಮಾರ್, ದಕ್ಷಿಣ ಕೇರಳ ಪ್ರಾಂತ ಪ್ರಚಾರಕ ಎಸ್.ಸುದರ್ಶನ್, ಎರ್ನಾಕುಳಂ ವಿಭಾಗ ಪ್ರಚಾರಕ ಜಿ.ಜಿ. ವಿಷ್ಣು, ಕಾರ್ಯವಾಹ ಬಿಜುಮೋನ್, ಶಿಕ್ಷಣ ಅಭಿವೃದ್ಧಿ ಕೇಂದ್ರದ ರಾಜ್ಯಾಧ್ಯಕ್ಷ ಡಾ.ಎನ್.ಸಿ.ಇಂದುಚೂಡನ್ ಮೊದಲಾದವರು ಅವರನ್ನು ಬರಮಾಡಿಕೊಂಡರು.
ನಂತರ ಸರ ಸಂಘಚಾಲಕರು ಚಿನ್ಮಯ ಆದಿಶಂಕರ ನಿಲಯಕ್ಕೆ ತೆರಳಿದರು. ಶುಕ್ರವಾರ ಬೆಳಗ್ಗೆ ನಡೆಯುವ ಚಿಂತನ ಬೈಠಕ್ ನಲ್ಲಿ ಅವರು ಪಾಲ್ಗೊಳ್ಳುವರು.


