ಬದಿಯಡ್ಕ: ಬಾಲಗೋಕುಲ ಬದಿಯಡ್ಕ ತಾಲೂಕು ಸಮಿತಿ ಪ್ರಶಿಕ್ಷಣ ವರ್ಗ ಮತ್ತು ಬಾಲಗೋಕುಲ ಜಿಲ್ಲಾ ಸಮ್ಮೇಳನ ಭಾನುವಾರ ಮಾರ್ಪನಡ್ಕ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಭಾ ಭವನದಲ್ಲಿ ಜರಗಿತು. ತಾಲೂಕು ಅಧ್ಯಕ್ಷ ಯೋಗೀಶ್ ಪೊಡಿಪ್ಪಳ್ಳ ಅಧ್ಯಕ್ಷತೆ ವಹಿಸಿದ್ದರು. ಉತ್ತರ ಕೇರಳ ಬಾಲಗೋಕುಲ ಪ್ರಾಂತ್ಯ ಅಧ್ಯಕ್ಷ ಹರೀಂದ್ರನ್ ಮಾಸ್ತರ್ ಧ್ವಜಾರೋಹಣಗೈದರು. ಉದ್ಯಮಿ ಕೊಡುಗೈದಾನಿ ಗೋಪಾಲಕೃಷ್ಣ ಪೈ ಬದಿಯಡ್ಕ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪೊಡಿಪ್ಪಳ್ಳ ಶ್ರೀ ಶಾರದಾಂಬ ಬಾಲಗೋಕುಲದ ವಿದ್ಯಾರ್ಥಿಗಳು ದೀಪಸ್ತುತಿ ಹಾಗೂ ಶ್ರೀಕೃಷ್ಣ ಬಾಲಗೋಕುಲದ ವಿದ್ಯಾರ್ಥಿಗಳಿಂದ ಧ್ವಜಗೀತೆ ನಡೆಯಿತು. ಪಾಂಚಜನ್ಯ ಬಾಲಗೋಕುಲದ ವಿದ್ಯಾರ್ಥಿಗಳು ಸಹಕರಿಸಿದರು. ಬಾಲಗೋಕುಲದ ಶಿಕ್ಷಕಿ ಲಾವಣ್ಯ ಗಿರೀಶ್ ಸುಶ್ರಾವ್ಯವಾಗಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಶ್ರೀಕೃಷ್ಣನ ಮೂರ್ತಿಗೆ ಮಾಲಾರ್ಪಣೆಗೈದರು. ಜಿಲ್ಲಾ ರಕ್ಷಾಧಿಕಾರಿ ಶಂಕರನಾರಾಯಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ತಾಲೂಕು ಕಾರ್ಯವಾಹ್ ನವೀನ್ ಏಣಿಯರ್ಪು ಉಪಸ್ಥಿತರಿದ್ದರು. ಬದಿಯಡ್ಕ ತಾಲೂಕು ಕಾರ್ಯದರ್ಶಿ ನಟರಾಜ ಕಲ್ಲಕಳಂಬಿ ಸ್ವಾಗತಿಸಿ, ಬಾಲಗೋಕುಲ ತಾಲೂಕು ಭಗಿನಿ ಪ್ರಮುಖ್ ನಯನ ಗಿರೀಶ್ ಅಡೂರು ವಂದಿಸಿದರು. ರಮೇಶ್ ಕೃಷ್ಣ ಪದ್ಮಾರು ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
