ಬದಿಯಡ್ಕ: ಶಿವಳ್ಳಿ ಬ್ರಾಹ್ಮಣ ಸಭಾ (ರಿ) ಕಾಸರಗೋಡು ವಲಯ ಸಮಿತಿಯ ಮಹಿಳಾ ಘಟಕದ ನೇತೃತ್ವದಲ್ಲಿ ಸುಖ ಶಾಂತಿ, ಆಯುಷ್ಯ ಆರೋಗ್ಯ ವೃದ್ಧಿಗಾಗಿ ಶ್ರಾವಣ ಮಾಸದ ಮಂಗಳವಾರ ಆಚರಿಸುವ "ಮಂಗಳ ಗೌರಿ ವ್ರತ" ಕಾರ್ಯದ ಆಮಂತ್ರಣ ಪತ್ರಿಕೆಯನ್ನು ಶ್ರೀಮದ್ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಪಾದಂಗಳವರು ಶ್ರೀಮಠದಲ್ಲಿ ಬಿಡುಗಡೆಗೊಳಿಸಿ ಮಂತ್ರಾಕ್ಷತೆಯನ್ನು ನೀಡಿ ಹರಸಿದರು. ಈ ಸಂದರ್ಭದಲ್ಲಿ ಕಾಸರಗೋಡು ವಲಯ ಅಧ್ಯಕ್ಷ ಸತ್ಯನಾರಾಯಣ ತಂತ್ರಿ, ಯುಎಸ್.ಬಿ.ಎಸ್ ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಕಡಮಣ್ಣಾಯ, ಕೇಂದ್ರ ಸಮಿತಿಯ ಸದಸ್ಯ ಮುರಳೀಧರ ಕಡಮಣ್ಣಾಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲ ತಂತ್ರಿ ಹಾಗೂ ಖಜಾಂಜಿ ರಂಜಿನಿ ಹರೀಶ್ ಉಪಸ್ಥಿತರಿದ್ದರು.

.jpg)
