ಬದಿಯಡ್ಕ: ಅಗಲಿದ ಸಾಮಾಜಿಕ, ಧಾರ್ಮಿಕ, ಕ್ರೀಡೆ, ಕೃಷಿ ಹಾಗೂ ಶೈಕ್ಷಣಿಕ ವಲಯದಲ್ಲಿ ದುಡಿದ ಯುವಕ, ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಸ್ಕೂಲ್‍ನ ಸಿಬ್ಬಂದಿ ಬಾಲಕೃಷ್ಣ ಸೀತಾಂಗುಳಿ ಅವರ ಸಂತಾಪ ಸಭೆಯು ಭಾನುವಾರ ಉಬ್ರಂಗಳ ಗ್ರಾಮ ವಿಕಾಸ ಸಮಿತಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಸಂಗೀತ ವಿದ್ವಾನ್ ಯೋಗೀಶ್ ಶರ್ಮಾ ಬಳ್ಳಪದವು, ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್‍ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಸತೀಶ್ ಮಾಸ್ತರ್, ನಿವೃತ್ತ ಅಧ್ಯಾಪಕ ಚಂದ್ರಶೇಖರ್ ಕುರುಪ್, ಕೃಷ್ಣ ಮಣಿಯಾಣಿ ಸೀತಾಂಗುಳಿ, ಗೋಪಾಲ ಯು. ರಾಜೇಶ್ ಮಾಸ್ತರ್ ಉಬ್ರಂಗಳ, ಉದಯ ಕುಮಾರ್ ಕಲ್ಲಕಟ್ಟ, ಕೆ.ಗಂಗಾಧರ್ ತೆಕ್ಕೆಮೂಲೆ, ರಾಜಶೇಖರ್ ಮಾಸ್ತರ್, ಪುರುಷೋತ್ತಮ ಪ್ರಸಾದ್, ಪ್ರಶಾಂತ ಉಬ್ರಂಗಳ ಮತ್ತಿತರರು ಅಗಲಿದವರೊಂದಿಗಿನ ಒಡನಾಡದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ವಲಯದ ಗಣ್ಯರು, ಹಿತೈಷಿಗಳು ಉಪಸ್ಥಿತರಿದ್ದರು.

.jpg)
