ಪೆರ್ಲ: ದೈವ ದೇವರ ಆರಾಧನೆಯಿಂದ ಆತ್ಮೋನ್ನತಿ ಜತೆಗೆ ಐಶ್ವರ್ಯ ಪ್ರಾಪ್ತಿಯಾಗಲು ಸಾಧ್ಯ ಎಂದು ಖ್ಯಾತ ಉದ್ಯಮಿ, ಧಾರ್ಮಿಕ ಮುಖಂಡ ಬಿ. ವಸಂತ ಪೈ ಬದಿಯಡ್ಕ ತಿಳಿಸಿದ್ದಾರೆ.
ಅವರು ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಧೀನದಲ್ಲಿರುವ ಬಜಕೂಡ್ಲು ರಾಜಂದೈವ ಹಾಗೂ ಪರಿವಾರ ದೈವಗಳ ದೈವಸ್ಥಾನಗಳ ಜೀರ್ಣೋದ್ಧಾರ ಸಮಿತಿ ವಿಶೇಷ ಸಭೆ ಮತ್ತು ಶ್ರೀದೇವರ ಬಲಿವಾಡು ಕೂಟದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬರಿಗೈಯಲ್ಲಿ ಬಂದವರಿಗೆ ಭೂಮಿಯಲ್ಲಿ ಬಹಳಷ್ಟು ಸಂಪತ್ತು ಕರುಣಿಸುವ, ಆದೇವರಿಗೆ ಹಾಗೂ ಈ ಸಮಾಜಕ್ಕಾಗಿ ನಾವೇನು ಕೊಡುಗೆ ನೀಡಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾವೆಲ್ಲರೂ ಪರೋಪಕಾರಿಗಳಾಗುವ ಮೂಲಕ ದೇವರ ಕೃಪೆ ಸಂಪಾದಿಸಿಕೊಳ್ಳಲು ತಯಾರಾಗೋಣ ಎಂದು ತಿಳಿಸಿದರು.
ಅವರು ದೇವಸ್ಥಾನ ಅಧೀನದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ರಾಜಂದೈವ ಮತ್ತು ಉಪದೈವಗಳ ಸಮಿತಿ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜೀರ್ಣೋದ್ಧಾರ ಪ್ರಕ್ರಿಎಯ ಶೀಘ್ರ ನಡೆಯಲು ಹಾಗೂ ಐಕ್ಯಮತ್ತೆಗಾಗಿ ಆ. 1ರಂದು ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀದುರ್ಗಾಪೂಜೆ ನಡೆಸಲು ತೀರ್ಮಾನಿಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಗಣೇಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಜಕೂಡ್ಲು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ರಾಮಕೃಷ್ಣ ಭಟ್ ಸರ್ಪಂಗಳ, ರಾಜಂದೈವ ಮತ್ತು ಉಪದೈವಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಕೋಶಾಧಿಕಾರಿ, ಉದ್ಯಮಿ ಉದಯ ಚೆಟ್ಟಿಯಾರ್ ಬಜಕೂಡ್ಲು ಉಪಸ್ಥಿತರಿದ್ದರು. ಸುಜಿತ್ ರೈ ಬಜಕೂಡ್ಲು ಸ್ವಾಗತಿಸಿ, ವಂದಿಸಿದರು.





