ಕಾಸರಗೋಡು: ಕನ್ನಡ ಪತ್ರಿಕಾ ದಿನಾಚರಣೆ ಹಾಗೂ ಕನ್ನಡ ಮಾಧ್ಯಮ ಪತ್ರಕರ್ತರ ಕುಟುಂಬ ಮಿಲನ'ನಲಿವಿನ ನೌಕೆ'ಕಾರ್ಯಕ್ರಮ ಜುಲೈ 13ರಂದು ಬೆಳಗ್ಗೆ 9.30ಕ್ಕೆ ನೀಲೇಶ್ವರದ ತಾಜ್ ಕ್ರೂಯಿಜ್ ಬೋಟ್ ಹೌಸ್‍ನಲ್ಲಿ ಜರುಗಲಿದೆ.
ಕರ್ನಾಟಕ ಸರ್ಕಾರದ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ ಸಮಾರಂಭಕ್ಕೆ ಚಾಲನೆ ನೀಡುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪತ್ರಿಕಾ ದಿನದ ಸಂದೇಶ ನೀಡುವರು. ಈ ಸಂದರ್ಭ ಹಿರಿಯ ಪತ್ರಕರ್ತ ಗಂಗಾಧರ ಪಿಲಿಯೂರು ಅವರಿಗೆ ಪತ್ರಿಕಾ ದಿನ ಪ್ರಶಸ್ತಿ ನಿಡಿ ಗೌರವಿಸಲಾಗುವುದು. ಕನ್ನಡ ಸಂಘಟಕ, ಶಿಕ್ಷಣ ತಜ್ಞ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ಗೌರವಿಸಲಾಗುವುದು. ಈ ಸಂದರ್ಭ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕøತಿಕ ವಲಯದ ಪ್ರಮುಖರು ಪಾಲ್ಗೊಳ್ಳುವರು.





