ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಗೃಹಿಣಿಯೊಬ್ಬರನ್ನು ಅತ್ಯಾಚಾರವೆಸಗಿ, ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರಿನ ಕಕ್ಕಾಡ್ ನಿವಾಸಿ ಹಾಗೂ ತಳಿಪರಂಬದ ಕ್ವಾರ್ಟರ್ಸ್‍ನಲ್ಲಿ ವಾಸಿಸುವ ಶಿಹಾಬುದ್ದೀನ್ ತಙಳ್ (52) ಎಂಬಾತನನ್ನು ಹೊಸದುರ್ಗ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಬೆನ್ನು ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಗಮಿಸಿದ ಮಂತ್ರವಾದಿ ತಙಳ್ ಅತ್ಯಾಚಾರವೆಸಗಿರುವುದಲ್ಲದೆ, ಥಳಿಸಿ ಗಾಯಗೊಳಿಸಿರುವುದಾಗಿ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಬೆನ್ನು ನೋವಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ತಂಙಳ್‍ನನ್ನು 55ರ ಹರೆಯದ ಮಹಿಳೆ ಮನೆಗೆ ಕರೆಸಿ ಚಿಕಿತ್ಸೆ ನಡೆಸುತ್ತಿದ್ದರು. ಚಿಕಿತ್ಸೆ ಮಧ್ಯೆ ತನಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದು, ಇದನ್ನು ತಡೆದಾಗ ತಙಳ್ ತನ್ನಿಂದ ಚಿನ್ನಾಭರಣಕ್ಕೆ ಬೇಡಿಕೆಯಿರಿಸಿದ್ದು, ತನ್ನ ಚಿನ್ನಾಭರಣ ಲಾಕರ್‍ನಲ್ಲಿರುವುದಾಗಿ ತಿಳಿಸಿದಾಗ ತನ್ನನ್ನು ಕಬ್ಬಿಣದ ಸಲಾಕೆಯಿಂದ ಥಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.




