ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ವಿವಿದೆಡೆ ಸಮುದ್ರ ಕೊರೆತದಿಂದ ಅತಿಯಾದ ಹಾನಿಯುಂಟಾಗಿದೆ. ಕಾಸರಗೋಡಿನ ಕೀಯೂರು ತೃಕ್ಕನ್ನಾಡು ಪ್ರದೇಶದಲ್ಲಿ ಭಾರೀ ನಾಶ ನಷ್ಟ ಸಂಭವಿಸಿದೆ.
ಕಡಲ್ಕೊರೆತದಿಂದ ರಸ್ತೆ, ಮನೆಗಳಿಗೂ ಹಾನಿಯುಂಟಾಗಿದೆ. ಜಿಯೋ ಚೀಲ ಇರಿಸಿ ತಡೆಗೋಡೆ ನಿರ್ಮಿಸಿದ್ದರೂ, ಭಾರೀ ಅಲೆಗಳ ಹೊಡೆತಕ್ಕೆ ಇದು ಸಂಪೂರ್ಣ ಹಾಣಿಗೀಡಾಗಿದೆ. ವಷರ್ಂಪ್ರತಿ ಸಂಭವಿಸುವ ಕಡಲ್ಕೊರೆತ ತಡೆಗೆ ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ನೇತೃತ್ವದ ನಿಯೋಗ ಆಗ್ರಹಿಸಿದೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಉದುವ ಮಂಡಲಾಧ್ಯಕ್ಷೆ ಶೈನಿ ಪ್ರಭಾಕರನ್, ಕಾರ್ಯದರ್ಶಿ ಮುರಳೀಧರನ್ ಮೊದಲಾದವರು ಉಪಸ್ಥಿತರಿದ್ದರು.





