HEALTH TIPS

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮೂರು ಹೊಸ ಪದವಿ ಕಾರ್ಯಕ್ರಮ ಈ ವರ್ಷದಿಂದ ಪ್ರಾರಂಭ

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಈ ಶೈಕ್ಷಣಿಕ ವರ್ಷದಿಂದ ಮೂರು ಹೊಸ ಪದವಿ ವಿಭಾಗವನ್ನು ಪ್ರಾರಂಭಿಸುತ್ತಿದೆ. ಸ್ಕೂಲ್ ಆಫ್ ಬಯಾಲಾಜಿಕಲ್ ಸಯನ್ಸ್ ಅಧೀನದಲ್ಲಿ  ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ವ್ಯವಹಾರ ವಿಭಾಗದಡಿಯಲ್ಲಿ ಬಿಎಸ್ಸಿ (ಆನರ್ಸ್) ಜೀವಶಾಸ್ತ್ರ, ಬಿಕಾಂ (ಆನರ್ಸ್) ಹಣಕಾಸು ವಿಶ್ಲೇಷಣೆ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದ ಅಡಿಯಲ್ಲಿ ಬಿಸಿಎ (ಆನರ್ಸ್)ಎಂಬ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ.

ಇದನ್ನು ಮಲ್ಟಿಪಲ್ ಎಂಟ್ರಿ ಹಾಗೂ ಮಲ್ಟಿಪಲ್ ಎಕ್ಸಿಟ್ ಆಧಾರದಲ್ಲಿ ಜಾರಿಗೆ ತರಲಾಗುತ್ತಿದೆ. ಮೊದಲ ವರ್ಷದಲ್ಲಿ ಪ್ರಮಾಣಪತ್ರ, ಎರಡನೇ ವರ್ಷದಲ್ಲಿ ಡಿಪೆÇ್ಲಮಾ ಮತ್ತು ಮೂರನೇ ವರ್ಷದಲ್ಲಿ ಪದವಿ ಪಡೆಯಲು ಸಾಧ್ಯವಿದೆ. ಒಂದು ವರ್ಷದ ಪದವಿಯ ನಂತರ ಎರಡು ವರ್ಷಗಳ ಸ್ನಾತಕೋತ್ತರ ಪದವಿಯನ್ನು ಮಾಡಬಹುದು. ಅಥವಾ ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಿದಲ್ಲಿ ಸಂಶೋಧನಾ ಗೌರವಗಳೊಂದಿಗೆ ಪದವಿಯನ್ನು ಪಡೆಯಬಹುದಾಗಿದೆ.  ಈ ರೀತಿ ಪದವಿ ಪಡೆದವರಿಗೆ ಒಂದು ವರ್ಷದ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡಿದರೆ ಸಾಕಾಗುವುದು.  ಸ್ನಾತಕೋತ್ತರ ಪದವಿ ಇಲ್ಲದೆ ನೇರವಾಗಿ ಸಂಶೋಧನೆಗೂ ಅವಕಾಶವಿರಲಿದೆ.

ಜಾಗತಿಕವಾಗಿ ತಲೆಯೆತ್ತುತ್ತಿರುವ ಅವಕಾಶಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಇಂತಹ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ವೃತ್ತಿಜೀವನಕ್ಕೆ ಸಿದ್ಧಪಡಿಸಲು ಇದರಿಂದ ಸಾಧ್ಯವಾಗಲಿರುವುದಾಗಿ ವಿಶ್ವ ವಿದ್ಯಾಲಯ ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಯುಜಿ ಪ್ರವೇಶಕ್ಕಾಗಿ  ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಧರಿಸಿದ್ದು,  ಪರೀಕ್ಷೆಯಲ್ಲಿ ಭಾಗವಹಿಸಿದವರಿಗೆ ವಿಶ್ವವಿದ್ಯಾಲಯಕ್ಕೆ ಪ್ರವೇಶ ನೀಡಲಾಗುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries