ಕಾಸರಗೋಡು: ವಿವಿಧ ಬೇಡಿಕೆಎ ಮುಂದಿರಿಸಿ ಜುಲೈ 9 ರಂದು ನಡೆಯಲಿರುವ ರಾಷ್ಟ್ರೀಯ ಮುಷ್ಕರದ ಯಶಸ್ವಿಗಾಗಿ ಶಿಕ್ಷಕರ ಸೇವಾ ಸಂಘಟನೆಯ ವತಿಯಿಂದ ಕಾರ್ಮಿಕ ಹಕ್ಕು ಸಂರಕ್ಷಣಾ ಸಭೆಯನ್ನು ಆಯೋಜಿಸಲಾಯಿತು.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ. ಕೃಷ್ಣನ್ ಸಮಾರಂಭ ಉದ್ಘಾಟಿಸಿದರು. ಮುಷ್ಕರ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ಕರಿಚ್ಚೇರಿ ಅಧ್ಯಕ್ಷತೆ ವಹಿಸಿದ್ದರು. ಜಾಯಿಂಟ್ ಕೌನ್ಸಿಲ್ ರಾಜ್ಯ ಸಮಿತಿ ಕಾರ್ಯದರ್ಶಿ ನರೇಶ್ ಕುಮಾರ್ ಕುನ್ನಿಯೂರ್, ಎಕೆಎಸ್‍ಟಿಯು ರಾಜ್ಯ ಕಾರ್ಯದರ್ಶಿ ಕೆ. ಪದ್ಮನಾಭನ್, ಕೆಜಿಒಎಫ್ ರಾಜ್ಯ ಸಮಿತಿ ಸದಸ್ಯ ಸಂತೋಷ್ ಕುಮಾರ್ ಚಾಲಿಲ್, ಸಿ.ಕೆ.ಬಿಜುರಾಜ್, ದಿವಾಕರನ್ ಬಾನಂ, ಯಮುನಾ ರಾಘವನ್, ವಿನಯನ್ ಕಲ್ಲತ್ತ್, ಎಂ.ಟಿ.ರಾಜೀವನ್, ಎಸ್.ಎನ್.ಪ್ರಮೋದ್, ಪಿ.ಸನೂಪ್ ಉಪಸ್ಥಿತರಿದ್ದರು.





