ಆಲಪ್ಪುಳ: ಕೇರಳ ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಹಂತಕ್ಕೆ ಹತ್ತಿರದಲ್ಲಿದೆ ಎಂದು ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಮೃಗಾಲಯ ಸಚಿವೆ ಜೆ. ಚಿಂಜುರಾಣಿ ಹೇಳಿದರು.
ಮಾವೇಲಿಕ್ಕರ ವಲ್ಲಿಕುನ್ನಂ ಗ್ರಾಮ ಪಂಚಾಯತ್ ಪಶುವೈದ್ಯಕೀಯ ಆಸ್ಪತ್ರೆಯ ಹೊಸ ಕಟ್ಟಡದ ಶಿಲಾನ್ಯಾಸ ನೆರವೇರಿಸಿದ ನಂತರ ಸಚಿವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ದೇಶೀಯ ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಾಗಿದೆ. ಹೆಚ್ಚಿನ ಜನರನ್ನು ಡೈರಿ ಕ್ಷೇತ್ರಕ್ಕೆ ತರಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ತೆಂಗಿನ ನಾರು, ತೋಟಗಾರಿಕೆ ಮತ್ತು ಮೀನು ವಲಯದ ಕಾರ್ಮಿಕರಿಗಾಗಿ ರಾಜ್ಯದಲ್ಲಿ ವಿಶೇಷ ಡೈರಿ ಅಭಿವೃದ್ಧಿ ಯೋಜನೆಗಳಿವೆ ಎಂದು ಸಚಿವರು ಹೇಳಿರುವರು.





