ಕೊಚ್ಚಿ: ನಟ ಬಾಲಾ ಅವರಿಗೆ ಕೇರಳ ಲಾಟರಿಯ ಕಾರುಣ್ಯ ಬಹುಮಾನ ಲಭಿಸಿದೆ. ಬಾಲಾ ವರು ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಲಾಟರಿ ಗೆದ್ದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ನಟ ತಮ್ಮ ಪತ್ನಿ ಕೋಕಿಲಾ ಅವರಿಗೆ ಬಹುಮಾನದ ಹಣವನ್ನು ಹಸ್ತಾಂತರಿಸಿದರು. ನಂತರ ಯಾರಿಗಾದರೂ ಒಳ್ಳೆಯದನ್ನು ಮಾಡಲು ಕೋಕಿಲಾ ಅವರಿಗೆ ಹೇಳಿದರು. ಕಾರುಣ್ಯ ಲಾಟರಿಯಿಂದ ಅವರಿಗೆ 25,000 ರೂ. ಬಹುಮಾನ ಲಭಿಸಿದೆ.
ಬಾಲಾ ಅವರು ಮೊದಲ ಬಾರಿಗೆ ಇದು ನಮ್ಮ ಅದೃಷ್ಟ ಎಂದು ಹೇಳಿದರು. ಅವರು ವೀಡಿಯೊದಲ್ಲಿ ಲಾಟರಿ ಸಂಖ್ಯೆಗಳು ಮತ್ತು ಬಹುಮಾನದ ಹಣವನ್ನು ಪ್ರದರ್ಶಿಸಿರುವರು. ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕ ಜನರು ಕಾಮೆಂಟ್‍ಗಳನ್ನೂ ಮಾಡಿರುವರು.
ಎಲಿಜಬೆತ್ ಅವರೊಂದಿಗಿನ ವಿವಾಹವನ್ನು ಕೊನೆಗೊಳಿಸಿದ ನಂತರ ಬಾಲಾ ಕೋಕಿಲಾ ಅವರನ್ನು ವಿವಾಹವಾಗಿದ್ದರು. ಬಾಲಾ ಅವರ ವೈವಾಹಿಕ ಸಂಬಂಧದ ಬಗ್ಗೆ ಆಗಾಗ್ಗೆ ಸುದ್ದಿಗಳಾಗಿದ್ದವು. https://www.instagram.com/arun.ravindran.777/reel/DLxDtlFy-pj/





