ಕುಂಬಳೆ: ಎಬಿಸಿಡಿ ಯೋಜನೆಯ ಕುಂಬಳೆ ಗ್ರಾ.ಪಂ.ಮಟ್ಟದಲ್ಲಿ ಪೂರ್ಣಗೊಂಡಿರುವ ಬಗ್ಗೆ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಅವರು ಘೋಷಣೆ ಮಾಡಿರುವರು.
ಗ್ರಾ.ಪಂ.ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಶಿಷ್ಟ ಪಂಗಡಗಳಿಗೆ ಅಧಿಕೃತ ದಾಖಲೆಗಳನ್ನು ಪೂರ್ಣಗೊಳಿಸಿದ ಕುಂಬಳೆ ಗ್ರಾಮ ಪಂಚಾಯತಿಯ ಸಾಧನೆಯ ಬಗ್ಗೆ ಅವರು ಮಾಹಿತಿ ನೀಡಿದರು. ಸಬೂರ ಎಂ, ಪಂಚಾಯತಿ ಸಹಾಯಕ ಕಾರ್ಯದರ್ಶಿ ಮಾಧವನ್ ಕೆ, ಅಕ್ಷಯ ಬ್ಲಾಕ್ ಸಂಯೋಜಕ ಎ.ವಿ.ಬಾಬು, ಪಂಚಾಯತಿ ಸದಸ್ಯರಾದ ಮೋಹನ, ಪುಷ್ಪಲತಾ ಶೆಟ್ಟಿ, ಸುಲೋಚನಾ, ಶೋಭಾ, ರಿಯಾಜ್ ಮೊಗ್ರಾಲ್, ಕೌಲತ್ ಬೀವಿ, ವಿದ್ಯಾ ಎನ್ ಪೈ ಮತ್ತು ಪ್ರೇಮಾವತಿ ಮಾತನಾಡಿದರು. ಬುಡಕಟ್ಟು ವಿಸ್ತರಣಾಧಿಕಾರಿ ಕೆ. ವೀಣಾ ನಾರಾಯಣ ಸ್ವಾಗತಿಸಿ, ಅಕ್ಷಯ ಬ್ಲಾಕ್ ಸಂಯೋಜಕ ಕೆ. ಅಶೋಕ ವಂದಿಸಿದರು.
ಸಮುದಾಯದ ಸಾಮಾಜಿಕ ಕಾರ್ಯಕರ್ತರು, ಗ್ರಾಮದ ಹಿರಿಯರು, ಸಾರ್ವಜನಿಕರು ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುಂಬಳೆ ಅಕ್ಷಯ ಕೇಂದ್ರದ ವ್ಯವಸ್ಥಾಪಕ ವನಿತ್ ಕುಮಾರ್ ಮತ್ತು ಕಳತ್ತೂರು ಅಕ್ಷಯ ಕೇಂದ್ರಗಳ ಸಾಧನೆಗಳನ್ನು ಶ್ಲಾಘಿಸಿ ಪ್ರಶಸ್ತಿಗಳನ್ನು ನೀಡಲಾಯಿತು. ಸ್ಥಳೀಯಾಡಳಿತ ಸಂಸ್ಥೆಗೆ ಜಿಲ್ಲಾಡಳಿತದ ಮೆಚ್ಚುಗೆ ಪತ್ರವನ್ನು ಪಂಚಾಯತಿ ಅಧ್ಯಕ್ಷರು ಮತ್ತು ಆಡಳಿತ ಸಮಿತಿಯ ಸದಸ್ಯರು ಸ್ವೀಕರಿಸಿದರು.




.jpg)
