ಮಂಜೇಶ್ವರ: ಮಲಬಾರ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ಮಂಜೇಶ್ವರ ಮೀಂಜ ಪಂಚಾಯತಿಯ ಕೊಳಚಪ್ಪು ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಐದು ಸಾಂಪ್ರದಾಯಿಕವಲ್ಲದ ಟ್ರಸ್ಟಿಗಳ ಹುದ್ದೆಗಳಿಗೆ ಹಿಂದೂ ಭಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಜುಲೈ 31 ರೊಳಗೆ ಮಲಬಾರ್ ದೇವಸ್ವಂ ಮಂಡಳಿ, ಕಾಸರಗೋಡು ವಿಭಾಗದ ಸಹಾಯಕ ಆಯುಕ್ತರು, ನೀಲೇಶ್ವರ, ಇಲ್ಲಿಗೆ ಅಲ್ಲಿಸಬೇಕು. ಅರ್ಜಿ ನಮೂನೆಯನ್ನು ಮಲಬಾರ್ ದೇವಸ್ವಂ ಮಂಡಳಿಯ ವೆಬ್‍ಸೈಟ್‍ನಿಂದ ಮತ್ತು ಎಲ್ಲಾ ಕೆಲಸದ ದಿನಗಳಲ್ಲಿ ನೀಲೇಶ್ವರದ ಸಹಾಯಕ ಆಯುಕ್ತರ ಕಚೇರಿಯಿಂದ ಉಚಿತವಾಗಿ ಪಡೆಯಬಹುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.




