ಕಾಸರಗೋಡು: ತಳಂಗರೆ ಜಿಎಂಎಚ್‍ಎಸ್ ಶಾಲಾ 1975ನೇ ಬ್ಯಾಚ್‍ನ ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ, ವರ್ಷಪೂರ್ತಿ ನಡೆಯುತ್ತಿರುವ ವೈವಿಧ್ಯಮಯ ಕಾರ್ಯಕ್ರಮದನ್ವಯ 'ಮರ ಒಂದು ವರ'ಧ್ಯೇಯದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲೆಯಾದ್ಯಂತ ಹಣ್ಣಿನ ಮರಗಳಾಗಿ ಬೆಳೆಯಬಲ್ಲ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಸರಗೋಡು ಇಲಿಕುಂಜೆ ಇಗರ್ಜಿ ವಠಾರದಲ್ಲಿ ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಪಿ ಬಿಜು ಸಸಿ ನೆಟ್ಟು, ಇದಕ್ಕೆ ಸುತ್ತುಬೇಲಿ ಅಳವಡಿಸುವ ಮೂಲಕ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫಾದರ್ ಮ್ಯಾಥ್ಯೂ ಬೇಬಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಾಲಿಬಾಲ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭಾ ಸದಸ್ಯೆ ಸಕೀನಾ ಮೊಯ್ದೀನ್, ಟಿ.ಎ. ಶಾಫಿ, ಎಂ.ಎ. ಅಹ್ಮದ್. ಶಾಫಿ ತೇರುವತ್, ಜುಬೈರ್ ಪಳ್ಳಿಕ್ಕಲ್ ಉಪಸ್ಥಿತರಿದ್ದರು. ಎಂ.ಎ. ಲತೀಫ್ ಸ್ವಾಗತಿಸಿದರು. ಕಬೀರ್ ವಂದಿಸಿದರು.





