ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಮಹಿಂದ್ರ ಶಾಲೆಯಲ್ಲಿ ರೇಬಿಸ್ ಮುನ್ನೆಚ್ಚರಿಕೆ ತರಬೇತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಕ್ಕಳಿಗೆ ರೇಬಿಸ್ ರೋಗದ ಹರಡುವಿಕೆ ಮತ್ತು ಅದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ಕುರಿತು ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದದ ಕುಮಾರಿ ನಾನ್ಸಿ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕ್ಲಸ್ಟರ್ ಸಂಯೋಜಕಿ ಶಾರದಾ ಟೀಚರ್ ಅವರು ಉಪಸ್ಥಿತರಿದ್ದರು. ನಾಯಿಗಳ ಕಚ್ಚಿವಿಕೆಯಿಂದರೇ ರೇಬಿಸ್ ರೋಗ ಬರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಲಾಯಿತು. ಯಾವುದೇ ಪ್ರಾಣಿಯು ಕಚ್ಚಿದರೆ ತಕ್ಷಣ ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಲಾಯಿತು. ಮಕ್ಕಳು ತರಬೇತಿಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಹಲವು ಪ್ರಶ್ನೆಗಳನ್ನು ಕೇಳಿದರು. ಅಧ್ಯಾಪಕ ಅಬ್ದುಲ್ ಬಶೀರ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ವಂದಿಸಿದರು.

.jpg)
