ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ನೇಮಕಗೊಂಡ ನೂತನ ಆಡಳಿತ ಸಮಿತಿ ವತಿಯಿಂದ ಹಿರಿಯರಿಗೆ ಗೌರವಾರ್ಪಣೆ ಕಾಠ್ಯಕ್ರಮ ಇಂದು(ಜು.12) ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ದೇವಳದ ಮಾಜಿ ಅಧ್ಯಕ್ಷ ಸಿ.ಸಂಜೀವ್ ರೈ ಕೆಂಗಣಾಜೆ, ಸಚ್ಚಿದಾನಂದ ಖಂಡೇರಿ ಭಂಡಾರದ ಮನೆ ಮತ್ತು ಕಾಟುಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಅವರನ್ನು ಗೌರವಿಸಲಾಗುವುದು.
ಮಲಬಾರ್ ದೇವಸ್ವಂ ಬೋರ್ಡ್ ನೀಲೇಶ್ವರ ಏರಿಯಾ ಸಮಿತಿ ಸದಸ್ಯ ಎ.ಕೆ. ಶಂಕರನ್, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, ಕರ್ನಾಟಕ ಸರ್ಕಾರದ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕಳ ಮಲಾರು ಬೀಡು ಭಾಗವಹಿಸುವರು. ಮಧ್ಯಾಹ್ನ ದೇವಳದಲ್ಲಿ ಕಾರ್ತಿಕ ಪೂಜೆ- ಸಮಾರಾಧನೆ ನೆರವೇರಲಿದೆ.


