ಆಲುವ: ಕೇರಳದ ಎರ್ನಾಕುಳಂ ಜಿಲ್ಲೆಯ ಲಾಡ್ಜ್ ಒಂದರಲ್ಲಿ 34 ವರ್ಷದ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಘಟನೆ ಸಂಬಂಧ ಅದೇ ಕೋಣೆಯಿಂದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ನೇರ್ಯಮಂಗಲಂ ನಿವಾಸಿ 35 ವರ್ಷದ ಬಿನು ಬಂಧಿತ. ಮೂಲಗಳ ಪ್ರಕಾರ ಸಂತ್ರಸ್ತೆ ಅಖಿಲಾ ಹಾಗೂ ಬಿನು ಕೆಲ ದಿನಗಳಿಂದ ಸಂಬಂಧದಲ್ಲಿದ್ದರು.
ರಾತ್ರಿ ಇಬ್ಬರ ನಡುವೆ ಜಗಳ ನಡೆದು, ಭಾನುವಾರ ರಾತ್ರಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕೊಲೆ ಮಾಡಿದ ಬಳಿಕ ಸ್ನೇಹಿತರಿಗೆ ವಿಡಿಯೊ ಕರೆ ಮಾಡಿ ಶವವನ್ನು ತೋರಿಸಿದ್ದಾನೆ. ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿ ವಶದಲ್ಲಿದ್ದು, ವಿಸ್ತೃತ ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದು ಆಲುವ ಪೊಲೀಸರು ತಿಳಿಸಿದ್ದಾರೆ.




