ಕಾಸರಗೋಡು: ಎನ್‍ಐಎಯಿಂದ ಬಂಧಿಸಲ್ಪಟ್ಟಿರುವ ಪಾಕ್ ಗೂಢಚಾರಿಣಿ ಜ್ಯೋತಿ ಮಲ್ಹೋತ್ರ, ಕಾಸರಗೋಡಿನಿಂದ ತಿರುವನಂತಪುರಕ್ಕೆ ಆರಂಭಗೊಂಡಿದ್ದ ವಂದೇಭಾರತ್ ಎಕ್ಸ್‍ಪ್ರೆಸ್ ರೈಲಿನ ಉದ್ಘಾಟನೆ ಸಂದರ್ಭ ಕಾಸರಗೋಡಿಗೂ ಭೇಟಿ ನೀಡಿದ್ದಾಳೆ. ವಂದೇಭಾರತ್ ರೈಲಿನ ಹೊರ ಹಾಗೂ ಒಳ ಭಾಗದ ದೃಶ್ಯಾವಳಿ ಬಗ್ಗೆ ಸಂಪೂರ್ಣ ವಿಡಿಯೋ ಚಿತ್ರೀಕರಿಸಿರುವುದಲ್ಲದೆ, ರೈಲಿನಲ್ಲಿ ಮೊದಲ ಪ್ರಯಾಣ ನಡೆಸಿದ ಕೇಂದ್ರ ಸಚಿವ ವಿ. ಮುರಳೀಧರನ್, ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ರೈಲ್ವೆ ಸಲಹಾ ಸಮಿತಿ ಸದಸ್ಯ ಪಿ.ಕೆ ಕೃಷ್ಣದಾಸ್ ಅವರಿಂದಲೂ ಹೇಳಿಕೆ ದಾಖಲಿಸಿಕೊಂಡಿದ್ದಳು. ವಿವಿಧ ನಿಲ್ದಾಣಗಳಲ್ಲಿ ರೈಲಿಗೆ ಸ್ವಾಗತ ನೀಡುವ ಸಂದರ್ಭ ಹಾರಾರ್ಪಣೆ ನಡೆಸುವ ಚಿತ್ರಗಳೂ ಈಕೆಯ ಸಂಗ್ರಹದಲ್ಲಿದೆ. ವಿ. ಮುರಳೀಧರನ್ ಅವರು ಪತ್ರಕರ್ತರಿಗೆ ನೀಡುತ್ತಿರುವ ಸಂದರ್ಶನದ ಎಲ್ಲ ಮಾಹಿತಿಯೂ ಈಕೆ ವಿಡಿಯೋದಲ್ಲಿದೆ.
2023ರ ಏ. 25ರಂದು ಮೊದಲ ವಂದೇಭಾರತ್ ರೈಲು ಕಾಸರಗೋಡಿನಿಂದ ತಿರುವನಂತಪುರಕ್ಕೆ ಮೊದಲ ಸಂಚಾರ ಆರರಂಭಿಸಿದ್ದು, ಈ ಸಂದರ್ಭ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದಳು.
ಕೆಲವು ದಿವಸಗಳ ಹಿಂದೆಯಷ್ಟೆ ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಈಕೆಯನ್ನು ತನ್ನ ಸ್ವಂತ ಖರ್ಚಿನಲ್ಲಿ ಕೇರಳಕ್ಕೆ ಕರೆಸಿಕೊಂಡು ಆದರಾತಿಥ್ಯ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈಕೆಯ ಬಗ್ಗೆ ಮಾಹಿತಿ ಕಲೆಹಾಕುವ ಮಧ್ಯೆ ವಂದೇಭಾರತ್ ರೈಲಿನ ಆರಂಭೋತ್ಸವ ಸಂದರ್ಭ ಬಿಜೆಪಿಯ ಪ್ರಮುಖರೊಂದಿಗೆ ಕಾಣಿಸಿಕೊಂಡಿರುವುದನ್ನು ಪ್ರತಿಪಕ್ಷಗಳು ಅಸ್ತ್ರವನ್ನಾಗಿಸಲು ನೋಡುತ್ತಿದೆ. ಭಾರತಾಂಬೆಯ ಚಿತ್ರ ಅಂಗೀಕರಿಸದ ಎಡರರಂಗ, ಭಯೋತ್ಪಾದಕರಿಗಾಗಿ ಗೂಢಚಾರ ವೃತ್ತಿ ನಡೆಸುತ್ತಿರುವ ಮಹಿಳೆಯನ್ನು ಪೂಜಿಸುತ್ತಿರುವುದಾಗಿ ಬಿಜೆಪಿ ಆರೋಪಿಸಿದೆ.






