HEALTH TIPS

ಆನೆಕಲ್ಲು ಎ.ಯು.ಪಿ. ಶಾಲೆಯಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

ಮಂಜೇಶ್ವರ: ಆನೆಕಲ್ಲು ಎ.ಯು.ಪಿ.ಎಸ್ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಪಿ.ಟಿ.ಎ ಅಧ್ಯಕ್ಷ ಅಶ್ರಫ್. ಎ.ಎಂ ಆನೆಕಲ್ಲು ನೇತೃತ್ವದಲ್ಲಿ ಜರಗಿತು. ಮುಖ್ಯ ಶಿಕ್ಷಕಿ ರೇಣುಕಾ.ವಿ ಸ್ವಾಗತಿಸಿ, ವಾರ್ಷಿಕ ವರದಿ ಮತ್ತು ಆಯ ವ್ಯಯವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ನಿರ್ಗಮಿತ ಪಿ.ಟಿ.ಎ. ಅಧ್ಯಕ್ಷ ಅಶ್ರಫ್ ಎ.ಎಂ ಆನೆಕಲ್ಲು ಇವರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. 


ಮಾತೃ ಮಂಡಳಿಯ ಅಧ್ಯಕ್ಷೆ ದೀಕ್ಷಿತ ಪಲ್ಲೇದಪಡ್ಪು, ಉಪಾಧ್ಯಕ್ಷೆ ಲೀಲಾವತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸೈನ್ಸ್ ವರ್ಕಿಂಗ್ ಮಾಡೆಲ್ ಸ್ಪರ್ಧೆಗೆ ಆಯ್ಕೆಯಾದ ಹಳೆ ವಿದ್ಯಾರ್ಥಿ ಅಬೂಬಕರ್ ಫಾಸಿಲ್ ಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ವಿತರಿಸಲಾಯಿತು. 


ಬಳಿಕ 2025-26ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ನೂತನ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಹಿರಿಯ ಅಧ್ಯಾಪಕ ರವಿಶಂಕರ್ ಮಾಸ್ತರ್ ನಡೆಸಿಕೊಟ್ಟರು. ನೂತನ ಅಧ್ಯಕ್ಷರಾಗಿ ಪ್ರಶಾಂತ್ ಬಗಂಬಿಲ ಮತ್ತು ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ಅಶೋಕ್ ಮಾಸ್ತರ್ ಕೊಡ್ಲಮೊಗರು ಅವಿರೋಧವಾಗಿ ಆಯ್ಕೆಯಾದರು. ಮಾತೃ ಸಂಘದ ಅಧ್ಯಕ್ಷೆಯಾಗಿ ಶೋಭಾ ಹಾಗೂ ಉಪಾಧ್ಯಕ್ಷೆಯಾಗಿ ಭವ್ಯಶ್ರೀ ಹಾಗೂ 16 ಮಂದಿ ಸದಸ್ಯರನ್ನು ಆಯ್ಕೆಮಾಡಲಾಯಿತು.  ಸ್ಕೂಲ್ ಪ್ರೊಟೆಕ್ಟ್ ಗುಂಪಿನ ವತಿಯಿಂದ ಮಾದಕ ವ್ಯಸನದ ಜಾಗೃತಿಯ ಕುರಿತು ಪೋಷಕರಿಗೆ ಜನಮೈತ್ರಿ ಪೋಲೀಸ್ ಅಧಿಕಾರಿ ಮಧು ವಿಶೇಷ ಮಾಹಿತಿಯನಿತ್ತರು. ನಿವೃತ್ತ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್ ತಮ್ಮ ಸೇವಾವಧಿಯ ಸುಂದರ ಅನುಭವದ ಕ್ಷಣಗಳನ್ನು ಹಂಚಿಕೊಂಡರು. ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಉಡುಗೊರೆಯಾಗಿ ಶಾಲೆಗೆ ಕಪಾಟು ಹಸ್ತಾಂತರ ಮಾಡಲಾಯಿತು. ಶಿಕ್ಷಕ ಹರೀಶ.ವಿ ವಂದಿಸಿದರು. ಸಂತೋಷ್ ಕುಮಾರ್.ಕೆ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries