ಉಪ್ಪಳ: ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ 2025-26ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ನಡೆಸಿ, ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಪ್ರಜಾಪ್ರಭುತ್ವ ರೀತಿಯಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಶಾಲಾ ನಾಯಕನ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಗಳಾದರು.
ಹಿಂದಿ ಅಧ್ಯಾಪಕ ಸತೀಶ್ ಸುವರ್ಣ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ, ಚುನಾವಣಾ ಪ್ರಕ್ರಿಯೆಗಳನ್ನು ವಿದ್ಯಾರ್ಥಿಗಳು ಪೂರ್ತಿಗೊಳಿಸಿದರು. ಚುನಾವಣೆಯ ಮತ ಎಣಿಕೆಯ ನಂತರ ಹಿರಿಯ ಶಿಕ್ಷಕ ಗಿರೀಶ್ ಮಾಸ್ತರ್ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿನಿಧಿಗಳ ಹೆಸರನ್ನು ಶಾಲಾ ಅಸೆಂಬ್ಲಿ ನಡೆಸಿ, ಔದ್ಯೋಗಿಕವಾಗಿ ಘೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ 7ನೇ ತರಗತಿಯ ಫಾತಿಮತ್ ವಫ ಶಾಲಾ ನಾಯಕಿಯಾಗಿ ಆಯ್ಕೆಯಾದಳು. ಉಪ ನಾಯಕನಾಗಿ 5ನೇ ತರಗತಿಯ ಲಿಖಿತ್ ಶೆಟ್ಟಿ ಆಯ್ಕೆಯಾದನು. ಆಯ್ಕೆಯಾದ ಶಾಲಾ ಪ್ರತಿನಿಧಿಗಳನ್ನು ಶಿಕ್ಷಕ ವೃಂದ ಅಭಿನಂದಿಸಿತು. ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಚುನಾವಣಾ ಪ್ರಕ್ರಿಯೆಗೆ ಪೂರ್ಣ ಸಹಕಾರ ನೀಡಿದರು.

.jpg)
.jpg)
.jpg)
.jpg)
