ಬದಿಯಡ್ಕ: ಕುಂಬ್ಡಾಜೆ ಗ್ರಾಮದ ಪಾತೇರಿ ಶ್ರೀ ಶಂಕರನಾರಾಯಣ ದೇವಸ್ಥಾನದ ಜೀರ್ಣೋದ್ದಾರದ ಬಗ್ಗೆ ಮಾಹಿತಿ ನೀಡುವ ಮತ್ತು ನಿಧಿ ಸಂಗ್ರಹಕ್ಕಾಗಿ ಇರುವ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮವು ಜುಲೈ 6 ರಂದು ಶ್ರೀ ಕ್ಷೇತ್ರದಲ್ಲಿ ಜರಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಪ್ರಸಕ್ತ ವಿಜ್ಞಾಪನಾಪತ್ರವನ್ನು ಶ್ರೀ ಕ್ಷೇತ್ರದ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾರಾಯಣ ಗೋಸಾಡ ಇವರು ಶ್ರೀಮದ್ ಎಡನೀರು ಮಠದಲ್ಲಿ ಶ್ರೀ ದೇವರ ಮುಂದೆ ಹಾಗೂ ಎಡನೀರು ಮಠಾಧೀಶರಾದ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಸಮ್ಮುಖದಲ್ಲಿ ಸಮರ್ಪಿಸಿ ಪ್ರಸಾದ, ಮಂತ್ರಾಕ್ಷತೆ ಸ್ವೀಕರಿಸಿದರು. ಈ ಸಂದರ್ಭ ಶ್ರೀ ಕ್ಷೇತ್ರದಲ್ಲಿ ಮುಂದೆ ನಡೆಯಲಿರುವ ಸಕಲ ಕಾರ್ಯಗಳ ಸಿಧ್ಯರ್ಥವಾಗಿ ಎಡನೀರುಶ್ರೀಗಳು ಅನುಗ್ರಹ, ಆಶೀರ್ವಾದ ನೀಡುವುದರ ಜತೆಗೆ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಫಲ ಮಂತ್ರಾಕ್ಷತೆಯನ್ನು ನೀಡಿ ಶ್ರೀದೇವರ ಕೃಪೆ ಆಗುವುದಾಗಿ ಹರಸಿ ಪೂಜ್ಯ ಸ್ಟಾಮೀಜಿ ಹರಸಿದರು.




.jpg)
