ಬದಿಯಡ್ಕ: ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳ ಅವಲೋಕನ ಸಭೆ ಇತ್ತೀಚೆಗೆ ಶ್ರೀ ಎಡನೀರು ಮಠದ ಪರಿಸರದಲ್ಲಿ ನಡೆಯಿತು.
ಎಡನೀರು ಮಠಾಧೀಶರೂ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರೂ ಆದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿ, ಶತಮಾನಗಳಿಂದ ನಶಿಸಿ ಹೋದ ಈ ಕ್ಷೇತ್ರವು ಅತ್ಯಂತ ಶ್ರದ್ಧೆಯ ಕೇಂದ್ರಬಿಂದು. ಮುಂದಿನ ವರ್ಷ ಏಪ್ರಿಲ್ ಮೊದಲು ದೇವರ ಪ್ರತಿಷ್ಠಾ ಕಾರ್ಯ ನಡೆಯಲಿ ಎಂದು ಶ್ರೀಗಳು ಹಾರೈಸಿದರು.
ನವೀನ ಕುಮಾರ್ ಕುಂಜಾರಕಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರು ಕ್ಷೇತ್ರದ ಗರ್ಭಗುಡಿ, ಮುಖ ಮಂಟಪದ ನಿರ್ಮಾಣದ ವಿವರಣೆ ನೀಡಿದರು. ಮುಂದಿನ ಹಂತದ ಕಾಮಗಾರಿ (ಸುತ್ತು ಗೋಪುರ) ಕೆಲಸ ಆರಂಭವಾಗಿದ್ದು ಎಲ್ಲಾ ಭಕ್ತಾದಿಗಳು ಪ್ರಸ್ತುತ ಸೂಕ್ತ ಸಮಯದಲ್ಲಿ ಸಹಕರಿಸಬೇಕೆಂದು ಕೋರಿದರು. ಸಭೆಯಲ್ಲಿ ಮಾತನಾಡಿದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಎಲ್ಲಾ ಸಹಕಾರಗಳನ್ನು ತಿಳಿಸಿದರು.
ನಿವೃತ್ತ ಶಿಕ್ಷಕ ಕೆ.ಎಂ. ಹೇರಳ, ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ವಕೀಲ ಶಶಿಧರ ಭಟ್ ಮಲ್ಲ, ಕೆ.ವಿ.ಬಾಲಕೃಷ್ಣನ್ ಆಚಾರಿ ಕಳೇರಿ, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ,, ಮಹೇಶ್ ವಳಕ್ಕುಂಜ ಮೊದಲಾದವರು ಮಾತನಾಡಿದರು. ಕೆ.ಎಂ ಶರ್ಮಾ ಎಡನೀರು ಪ್ರಾಸ್ತಾವಿಕವಾಗಿ ಮಾತನಾಡಿ ಇದುವರೆಗಿನ ಕಾಮಗಾರಿಯ ಕುರಿತು ತಿಳಿಸಿದರು. ಧನ ಸಂಗ್ರಹ ಕುರಿತು ಮಾಹಿತಿ ನೀಡಿದರು. ಸರಿತಾ ಪಾಲಕಾಲ್ ಪ್ರಾರ್ಥಿಸಿದರು. ಜಗನ್ನಾಥ ಕೆಮ್ಮಂಗಯ ಸ್ವಾಗತಿಸಿ, ವಿನಯಪಾಲ್ ವಂದಿಸಿದರು.




.jpg)
.jpg)
