HEALTH TIPS

ಬಂಜೆತನ ಸಮಸ್ಯೆಗಳಿಗೆ ಉಚಿತ ಮಾರ್ಗದರ್ಶನ ನೀಡಲು ಬಂತು ಟೋಲ್-ಫ್ರೀ ಸಂಖ್ಯೆ

ದೇಶದಲ್ಲಿ ಫಲವತ್ತತೆ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಫಲವತ್ತತೆ ಕುರಿತು ಸಲಹೆ ನೀಡಲು ಉಚಿತ ಟೋಲ್‌-ಫ್ರೀ ದೂರವಾಣಿ ವ್ಯವಸ್ಥೆ ಕಲ್ಪಿಸಿದೆ. ಈ ಕುರಿತು ಮಾತನಾಡಿದ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್ ಅಗ್ರವಾಲ್, 1800 123 1515 ಈ ಟೋಲ್‌ಫ್ರೀ ಸಂಖ್ಯೆಯು ವಾರದ ದಿನಗಳಲ್ಲಿ 9 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸಲಿದೆ, ಪ್ರಸ್ತುತ ಇಂಗ್ಲಿಷ್‌ ಹಾಗೂ ಹಿಂದೆ ಭಾಷೆಯಲ್ಲಿ ಈ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗುವಂತೆ ಮಾಡಲಾಗುವುದು ಎಂದರು.

ಒತ್ತಡದ ಬದುಕಿನಿಂದಾಗಿ ಸಾಕಷ್ಟು ಜನರು ಇಂದು ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಫಲವತ್ತತೆ ಹೊಂದದೇ ಇರಲು ಕಾರಣವೇನು ಎಂಬುದರ ಬಗ್ಗೆಯೂ ಸಾಕಷ್ಟು ಜನರಿಗೆ ಸ್ಪಷ್ಟತೆ ಇರುವುದಿಲ್ಲ ಅಷ್ಟೇ ಅಲ್ಲದೆ, ಸಾಕಷ್ಟು ಗೊಂದಲ ಹಾಗೂ ಹತಾಶೆ ಹೊಂದಿರುತ್ತಾರೆ. ಮುಂದೆ ಏನು ಮಾಡಬೇಕು ಎಂಬ ಅರಿವಿನ ಕೊರತೆಯಲ್ಲೂ ಇರುತ್ತಾರೆ. ಇವರಿಗಾಗಿಯೇ ಬಿರ್ಲಾ ಫರ್ಟಿಲಿಟಿ ದೇಶಾದ್ಯಂತ ಈ ಟೋಲ್‌ಫ್ರೀ ಉಚಿತ ಕರೆಯನ್ನು ಪರಿಚಯಿಸಿದೆ. ಈ ಮೂಲಕ ದಂಪತಿಗಳಿಗೆ ಮಾರ್ಗದರ್ಶನ ನೀಡುವುದು, ಭಾವನಾತ್ಮಕ ಬೆಂಬಲ ಮತ್ತು ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ.

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ನ ಆಂತರಿಕ ಅಧ್ಯಯನದ ಪ್ರಕಾರ, ಫಲವತ್ತತೆಯ ಸಮಸ್ಯೆ ಎದುರಿಸುತ್ತಿರುವ ಶೇ, 90ರಷ್ಟು ದಂಪತಿಗಳು ಭಾವನಾತ್ಮಕತೆಯಿಂದ ಬಳಲುತ್ತಾರೆ. ಇದರಲ್ಲಿ ಶೇ, 29ರಷ್ಟು ಜನರು ಮಾತ್ರ ವೈದ್ಯರ ಬೆಂಬಲ ಪಡೆಯುತ್ತಾರೆ. ಎರಡು ವರ್ಷಗಳವರೆಗೆ ಸಹಾಯ ಪಡೆಯಲು ಅನೇಕರು ವಿಳಂಬ ಮಾಡುತ್ತಾರೆ, ಗೊಂದಲ, ಕಳಂಕದಿಂದ ಹಿಂದೆ ಸರಿಯುತ್ತಾರೆ ಅಥವಾ ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾರೆ. ಇವರಿಗಾಗಿ ಫಲವತ್ತತೆ ವಲಯವು ತರಬೇತಿ ಪಡೆದ ಸಲಹೆಗಾರರಿಂದ ತೀರ್ಪು-ಮುಕ್ತ ಮಾರ್ಗದರ್ಶನ ನೀಡುವ ಮೂಲಕ ಈ ಅಂತರವನ್ನು ನಿವಾರಿಸುವ ಗುರಿಯನ್ನು ಹೊಂದಿದೆ, ಯಾವುದೇ ವೆಚ್ಚ, ಒತ್ತಡ ಮತ್ತು ಸಂಪೂರ್ಣ ಗೌಪ್ಯತೆ ಕಾಪಾಡಲಿದೆ ಎಂದರು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries