HEALTH TIPS

ಹೆಚ್ಚು ಪೋನ್‌ ಕಂಪ್ಯೂಟರ್‌ ಬಳಸಿದ್ರೆ ಬರೋ ಸಮಸ್ಯೆ ಒಂದೆರಡಲ್ಲ ಹುಷಾರು

ಈಗಿನ ಅಧುನಿಕ ಬದುಕಿನಲ್ಲಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಮ್ಮ ಬಹುತೇಕ ಸಮಯವನ್ನ ಕಂಪ್ಯೂಟರ್‌, ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತೇವೆ.ಪ್ರತಿನಿತ್ಯ ಕಡಿಮೆ ಎಂದರೂ ಹತ್ತರಿಂದ ಹನ್ನೇರಡು ಗಂಟೆಗಳ ಕಾಲ ಕಂಪ್ಯೂಟರ್‌, ಮೊಬೈಲ್‌ ಮುಂದೆ ಕೂತಿರುತ್ತೇವೆ.

ಡಿಜಿಟಲ್ ಸಾಧನಗಳ ಬಳಕೆ ಹೆಚ್ಚುತ್ತಿರುವುದರಿಂದ ಮಾನಸಿಕ ಒತ್ತಡ. ಒಣ ಕಣ್ಣು ಸಮಸ್ಯೆ ಉಂಟಾಗುತ್ತಿದೆ.ಇನ್ನೂ ಹೆಚ್ಚು ಡಿಜಿಟಲ್ ಸಾಧನಗಳ ಬಳಕೆ ಹೆಚ್ಚುತ್ತಿರುವ ಈ ಯುಗದಲ್ಲಿ "ಡಿಜಿಟಲ್ ತಣಿವು" (Digital Fatigue) ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ. ಇದು ಕೇವಲ ಮಾನಸಿಕವಾಗಿ ಅಲ್ಲ ಕಣ್ಣುಗಳ ಮೇಲೆ ಸಹ ಪ್ರಭಾವ ಬೀರುತ್ತಿದೆ. ಡಿಜಿಟಲ್ ದಣಿವಿನಿಂದ ಉಂಟಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಎಂದರೆ "ಒಣ ಕಣ್ಣು" (Dry Eye Syndrome).

ಕಂಪ್ಯೂಟರ್, ಮೊಬೈಲ್, ಟಿವಿ ಮುಂತಾದ ಡಿಜಿಟಲ್ ಪರಿಕರಗಳನ್ನು ನಿರಂತರವಾಗಿ ಬಳಸುವಾಗ ನಾವು ಅಪಾರ ಸಮಯ ಕಂಪ್ಯೂಟರ್,ಮೊಬೈಲ್ ಮೇಲೆ ದೃಷ್ಟಿ ನೆಟ್ಟಿರುತ್ತೇವೆ. ಇದರ ಕಾರಣವಾಗಿ ಕಣ್ಣು ಮಿಟುಕಿಸುವ ಕ್ರಿಯೆ (blinking) ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ, ಮನುಷ್ಯನೊಬ್ಬನು ನಿಮಿಷಕ್ಕೆ ಸುಮಾರು 15-20 ಬಾರಿ ಕಣ್ಣು ಮಿಟುಕಿಸುತ್ತಾನೆ. ಆದರೆ, ಡಿಜಿಟಲ್ ಪರಿಕರಗಳನ್ನ ಬಳಸುವಾಗ ಈ ಸಂಖ್ಯೆಯು ಅರ್ಧಕ್ಕಿಂತ ಕಡಿಮೆಯಾಗುತ್ತದೆ. ಇದರಿಂದ ಕಣ್ಣುಗಳ ಮೇಲಿನ ತೇವಾಂಶವನ್ನು ಕಾಯ್ದುಕೊಳ್ಳುವ "ಕಣ್ಣಿನ ನೀರಿನ ಪದರ" ಸುಲಭವಾಗಿ ಒಣಗುತ್ತದೆ. ಇದಕ್ಕೆ ಜೊತೆಗೆ, ನಿರಂತರವಾಗಿ ಸ್ಕ್ರೀನ್ ಬಳಕೆಯಿಂದ ಕಣ್ಣುಗಳಲ್ಲಿ ಒತ್ತಡ, ಕೆಂಪುತನ,ಮಬ್ಬು ಮತ್ತು ಕೆಲವೊಮ್ಮೆ ಕಣ್ಣು ನೀರಾಡುವಂತಹ ಲಕ್ಷಣಗಳೂ ಕಾಣಿಸಬಹುದು. ಕೆಲವೊಮ್ಮೆ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಹ ಅಡಚಣೆ ಉಂಟಾಗಬಹುದು.ಇಂತಹ ಪರಿಸ್ಥಿತಿಗಳನ್ನು ತಡೆಗಟ್ಟಲು, ಪ್ರತಿ 20 ನಿಮಿಷಕ್ಕೊಮ್ಮೆ ಕಣ್ಣುಗಳನ್ನು 20 ಸೆಕೆಂಡುಗಳ ಕಾಲ 20 ಅಡಿಗಳ ದೂರದ ವಸ್ತುವಿನತ್ತ ನೋಡಿ ವಿಶ್ರಾಂತಿ ನೀಡುವುದು (20-20-20 ನಿಯಮ), ಕಣ್ಣು ಹೆಚ್ಚು ಹೈಡ್ರೇಟೆಡ್ ಆಗಿರುವುದು ಅವಶ್ಯಕ. ಹೆಚ್ಚು ಡಿಜಿಟಲ್‌ ಉಪಕರಣವನ್ನ ಬಳಸದೇ ಇರುವುದು ಒಣಕಣ್ಣನ್ನು ತಡೆಯುವುದು ನಮ್ಮ ದೃಷ್ಟಿ ಆರೋಗ್ಯವನ್ನು ಕಾಯ್ದುಕೊಳ್ಳಲು ಅತ್ಯಂತ ಮುಖ್ಯವಾದ ಹೆಜ್ಜೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಐ ಸ್ಟ್ರೈನ್(Digital eye strain) ಆರೋಗ್ಯ ಸಂಬಂಧಿತ ಪ್ರಮುಖ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ.ಡಿಜಿಟಲ್ ತಣಿವು (Digital Eye Strain) ಎಂದರೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಟಿವಿ ಮುಂತಾದ ಸ್ಕ್ರೀನ್‌ಗಳನ್ನು ಇಡೀ ಸಮಯ ನೋಡುತ್ತಿರುವ ಪರಿಣಾಮವಾಗಿ ಉಂಟಾಗುವ ಕಣ್ಣಿನ ಮತ್ತು ಮಾನಸಿಕ ದಣಿವು. ಇದನ್ನು Computer Vision Syndrome ಎಂದೂ ಕರೆಯುತ್ತಾರೆ. ಕೋವಿಡ್-19 ಮಹಾಮಾರಿ ನಂತರ ಆನ್‌ಲೈನ್ ಶಿಕ್ಷಣ ಮತ್ತು ವರ್ಕ್ ಫ್ರಂ ಹೋಮ್ ವ್ಯವಸ್ಥೆಗಳು ಜೀವನ ಶೈಲಿಯನ್ನೇ ಬದಲಿಸಿಬಿಟ್ಟಿದೆ.ಹೀಗೆ ಕುಳಿತುಕೊಂಡೆ ಕಂಪ್ಯೂಟರ್, ಮೊಬೈಲ್‌ಳಲ್ಲಿ ಕೆಲಸ ಮಾಡಿ ದೇಹ ಅದಕ್ಕೆ ಒಗ್ಗಿ ಹೋಗಿದೆ.ಈ ರೀತಿಯ ಜೀವನ ಶೈಲಿ ಕಣ್ಣುಗಳ ಆರೋಗ್ಯ ಮತ್ತು ಸಾಮಾನ್ಯ ಆರೋಗ್ಯ ಹೈಜಿನ್ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ದೀರ್ಘಕಾಲ ಸ್ಕ್ರೀನ್ ಬಳಕೆ ತಪ್ಪಿಸಲಾಗದ ಸಮಸ್ಯೆಯಾಗಿದೆ.ಕಂಪ್ಯೂಟರ್, ಮೊಬೈಲ್‌ಳಲ್ಲಿಯೇ ಕೆಲಸ ಮಾಡುವುದು ಅನಿವಾರ್ಯವಾಗಿಬಿಟ್ಟಿದೆ.

ಡಿಜಿಟಲ್ ಐ ಸ್ಟ್ರೈನ್(Digital eye strain)ಲಕ್ಷಣಗಳು ಮೊದಲನೆಯಾದಾಗಿ ಕಣ್ಣಿನ ಅಸ್ವಸ್ಥತೆ ಉಂಟಾಗುವಿಕೆ, ಕಣ್ಣು ಒಣಗುವುದು,ಮಬ್ಬಾದ ದೃಷ್ಟಿ ಹಾಗೇ ತಲೆ ನೋವು, ಒತ್ತಡದಂತಹ ಅನುಭವ ಆಗುವಂತಹ ಸಾಧ್ಯತೆ ಇರುತ್ತದೆ.ಒಣ ಕಣ್ಣು ಉಂಟುಮಾಡುವ ಕಾರಣ ಎಂದರೆ ಸ್ಕ್ರೀನ್‌ತ್ತ ದೃಷ್ಟಿ ಹಾಯಿಸಿದಾಗ ನಾವು ಹೆಚ್ಚು ಕಣ್ಣನ್ನ ಮಿಟುಕಿಸುವುದಿಲ್ಲ.ಇದರಿಂದ ಕಣ್ಣಿನ ತೇವಾಂಶ ಕಡಿಮೆಯಾಗುತ್ತದೆ.

ಒಣ ಕಣ್ಣಿನ (Dry Eye) ಸಮಸ್ಯೆಯನ್ನ ತಡೆಗಟ್ಟುವ ತಂತ್ರಗಳು ಜೀವನ ಶೈಲಿಯನ್ನ ಬದಲಿಸಿಕೊಳ್ಳುವುದೇ ಇದಕ್ಕೆ ಇರುವಂತಹ ಪರಿಹಾರ. ಇಗಿನ ದಿನಗಳಲ್ಲಿ ಕಂಪ್ಯೂಟರ್‌, ಮೊಬೈಲ್‌ಗಳಿಂದ ದೂರ ಇರುವುದು ಕಷ್ಟ ಆದರೆ ಅದರಲ್ಲಿ ಮಿತಿಯನ್ನ ಇಟ್ಟುಕೊಂಡರೆ ಅಲ್ಪ ಪ್ರಮಾಣದಲ್ಲಿಯಾದರೂ ಕಣ್ಣಿನ ಸಮಸ್ಯೆಯನ್ನ ತಡೆಯಬಹುದು. ಇದರ ಜೊತೆಗೆ ಪ್ರತಿ 20 ನಿಮಿಷಕ್ಕೊಮ್ಮೆ, 20 ಅಡಿಗಳ ದೂರದ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡುವುದು. ಜೊತೆಗೆ ಕಣ್ಣು ಮಿಟುಕಿಸುವ ಅಭ್ಯಾಸ ಮಾಡುವುದು ಉತ್ತಮ.ಲ್ಯೂಬ್ರಿಕೇಟಿಂಗ್ ಐ ಡ್ರಾಪ್ಸ್‌ ಬಳಸಿ ಕಣ್ಣು ತೇವಾಂಶಭರಿತವಾಗಿ ಇಟ್ಟುಕೊಳ್ಳಬಹುದು. ಆದರೆ ಇದಕ್ಕೆ ವೈದ್ಯರ ಸಲಹೆ ಪಡೆಯುವುದು ಉತ್ತಮ.ಬ್ಲೂ ಲೈಟ್ ಫಿಲ್ಟರ್ ಗಾಜುಗಳು ಬಳಸುವುದರಿಂದ ಹೆಚ್ಚು ಸ್ರ್ಕೀನ್‌ ಮೇಲಿನ ಬೆಳಕು ಕಣ್ಣಿನ ಮೇಲೆ ಬೀಳುವುದಿಲ್ಲ.ನೀವು ಹೆಚ್ಚುಕಂಪ್ಯೂಟರ್, ಮೊಬೈಲ್, ಟಿವಿ ಬಳಸುವ ಜಾಗದಲ್ಲಿ ಹೆಚ್ಚು ಬೆಳಕು ಇರುವಂತೆ ನೋಡಿಕೊಳ್ಳಿ, ಇದರಿಂದ ಸ್ಕ್ರೀನ್‌ನ ಬೆಳಕಿನ ಪರಿಣಾಮ ಕಡಿಮೆಯಾಗುತ್ತದೆ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries