ಉಪ್ಪಳ: ಭಾರತದ ಸಾರ್ವಭೌಮತೆ, ಶಾಂತಿ, ಸಮಾಧಾನಗಳು ನೆಲೆಗೊಳ್ಳಲು, ಭಾರತೀಯ ತ್ರಿವರ್ಣ ಧ್ವಜ ಸ್ವಚ್ಛಂದವಾಗಿ ಹಾರಾಡಲು ಕಾರಣ ಗಾಳಿಯಲ್ಲ, ವೀರ ಹುತಾತ್ಮ ಸೈನಿಕರ ಉಸಿರು ಎಂದು ಖ್ಯಾತ ರಾಷ್ಟ್ರೀಯ ಚಿಂತಕ, ಸುವರ್ಣ ಸುದ್ದಿ ವಾಹಿನಿ ಸಂಪಾದಕ ಅಜಿತ್ ಹನುಮಕ್ಕನವರ್ ಅಭಿಪ್ರಾಯಪಟ್ಟರು.
ಉಪ್ಪಳದ Àಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶನಿವಾರ ನಡೆದ ‘ಕಾರ್ಗಿಲ್ ವಿಜಯ್ ದಿವಸ್" ಆಚರಣೆ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಗೈದು ಅವರು ಮಾತನಾಡಿದರು.
ಕಾರ್ಗಿಲ್ ಯುದ್ದದ ಮೊದಲ ಹುತಾತ್ಮ ಕ್ಯಾಪ್ಟನ್ ಸೌರಬ್ ಕಾಲಿಯಾರನ್ನು ಚಿತ್ರಹಿಂಸೆಗೊಳಪಡಿಸಿದ ಶವವನ್ನು ಪಾಕಿಸ್ತಾನೀಯರು ಭಾರತಕ್ಕೆ ಹಿಂತಿರುಗಿಸಿದ್ದರು. ಆದರೆ, ಭಾರತೀಯ ಸೇನೆ, ಪಾಕಿಸ್ತಾನ ತನ್ನÀದಲ್ಲವೆಂದು ಹೇಳಿದ್ದ ಸೈನಿಕರ ಶವಗಳನ್ನು ಅಲ್ಲಿಯ ಪತಾಕೆ ಹೊದೆಸಿ ಕಳಿಸಿರುವುದು ಇತಿಹಾಸದಲ್ಲಿ ದಾಖಲಾಗಿದ್ದು, ಭಾರತೀಯ ಮನೋಸ್ಥಿತಿಯ, ಸಂಸ್ಕøತಿಯ ಪ್ರತೀಕ ಎಂದವರು ತಿಳಿಸಿದರು. ಭಾರತೀಯ ಸೇನೆ ಜÀಗತ್ತಿನ ಅತ್ಯಂತ ನೈತಿಕ ಸೇನೆ ಎಂಬುದು ಹೆಮ್ಮೆಯ ವಿಷಯ ಎಂದವರು ಬೊಟ್ಟುಮಾಡಿದರು.ಮಾತ್ರವಲ್ಲ ಇಂದಿಗೂ ಪ್ರಪಂಚದ ಅನೇಕ ವಿದ್ಯಾಲಯಗಳಲ್ಲಿ ನಮ್ಮ ಸೇನೆಯ ಕುರಿತು ಅಧ್ಯಯನ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಗಿಲ್ ಸಮರzಲ್ಲಿ ಅತ್ಯಂತ ಚಿತ್ರಹಿಂಸೆಗೊಳಗಾಗಿ ಈಗಲೂ ಬದುಕಿರುವ ಗ್ರೆÀನೇಡಿಯರ್ ಜೋಗಿಂದರ್ ಸಿಂಗ್ ಯಾದವ್ ಅವರ ಸಾಧನೆಯನ್ನು ಉಲ್ಲೇಖಿಸಿ ಬದುಕಿದ್ದೂ ಪರಮವೀರ ಚಕ್ರ ಲಭಿಸಿದ ಅನಘ್ರ್ಯ ರತ್ನ ಎಂದವರು ನೆನಪಿಸಿದರು. ಅನ್ನ, ರಕ್ಷಣೆ ಮತ್ತು ಶಿಕ್ಷಣ ನೀಡಿದವರನ್ನು ನೆನಪಿಸದೆ, ಮನೋರಂಜನೆಯ ಸಾಧಕರನ್ನು ಮಾತ್ರ ಈಗ ಉತ್ಪ್ರೇಕ್ಷಣೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಅವರು, ಸೈನ್ಯ ಗಟ್ಟಿ ಇದ್ದರೆ ನಾವು ಗಟ್ಟಿ. ನಾವುÀ ಗಟ್ಟಿ ಇದ್ದರೆ. ದೇಶ ಗಟ್ಟಿ. ಸಂಸ್ಕøತಿ, ರಾಷ್ಟ್ರ ರಕ್ಷಣೆ ನಮ್ಮ ಆದ್ಯ ಕರ್ತವ್ಯಗಳಾಗಬೇಕೆಂದು ಅವರು ಕರೆ ನೀಡಿದರು.
ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಮಠ-ಮಂದಿರಗಳು ಧಾರ್ಮಿಕ ಪ್ರಜ್ಞೆ ಜೊತೆಗೆ ರಾಷ್ಟ್ರ ಭಕ್ತಿ ಉದ್ದೀಪನಗೊಳಿಸುವ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಸ್ತುತ್ಯರ್ಹ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಬ್ರಿಗೇಡಿರ್ ಐ.ಎನ್.ರೈ ಕುಂಬಳೆ, ಕಮಾಂಡರ್ ವಿಜಯಕುಮಾರ್ ಕಣ್ವತೀರ್ಥ, ಉದ್ಯಮಿ ಸುಕೇಶ್ ಹೆಗ್ಡೆ ಬೆಂಗಳೂರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರುಗಳು ಉಪಸ್ಥಿತರಿದ್ದು ಕಾರ್ಗಿಲ್ ವಿಜಯ ಮತ್ತು ರಾಷ್ಟ್ರ ರಕ್ಷಣೆಯಲ್ಲಿ ಸೈನ್ಯದ ಸಾಧನೆಗಳ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ 98ರ ಹರೆಯದ ಯೋಧ ಪಿ.ಕೆ.ಎನ್.ಪಿಳ್ಳೆ, ಆಶ್ರಮದ ಟ್ರಸ್ಟಿಗಳಾದ ಮೋನಪ್ಪ ಭಂಡಾರಿ ಮಂಗಳೂರು, ಶಶಿಧರ ಶೆಟ್ಟಿ ಗ್ರಾಮಚಾವಡಿ ಉಪಸ್ಥಿತರಿದ್ದರು.
ಈ ಸಂದ¨ssರ್À ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ವೀರ ಯೋಧ ಹವಾಲ್ದಾರ್ ಜೋನಿ ಮ್ಯಾಥ್ಯೂ ರಾಜಪುರಂ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಜೊತೆಗೆ ಸೈನ್ಯದಲ್ಲಿ ಈಗ ಸೇವೆ ಸಲ್ಲಿಸುತ್ತಿರುವ ಕೊಂಡೆವೂರಲ್ಲಿ ಶಿಕ್ಷಣ ಪಡೆದ ಸೈನಿಕರ ಮಾತಾಪಿತರನ್ನು ವಿಶೇಷವಾಗಿ ಗೌರವಿಸಿ ಉಳಿದವರಿಗೆ ಪ್ರೇರಣೆ ನೀಡಲಾಯಿತು. ಯಜ್ಞೇಶ್ ಬಾಯಾರ್ ಪ್ರಾರ್ಥಿಸಿದರು. ಅಶೋಕ ಮಾಸ್ತರ್ ಬಾಡೂರು ಸ್ವಾಗತಿಸಿ, ವಕೀಲ ಗಂಗಾಧರ ಕೊಂಡೆವೂರು ವಂದಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು.
ಇದಕ್ಕೂ ಮೊದಲು, ಕಾಸರಗೋಡು ಸರ್ಕಾರಿ ಕಾಲೇಜಿನ ಎನ್.ಸಿ.ಸಿ. ಕೆಡೆಟ್ ಗಳ ಗೌರವ ರಕ್ಷೆಯಲ್ಲಿ ಆಗಮಿಸಿದ ಗಣ್ಯರು ಹಾಗೂ ಪೂಜ್ಯ ಶ್ರೀಗಳು ‘ಅಮರ್ ಜವಾನ್’ ಜ್ಯೋತಿ ಬೆಳಗಿ ಪುಷ್ಪಾರ್ಚನೆಗೈದರು. ಬಳಿಕ ಕೊಂಡೆವೂರು ಸದ್ಗುರುಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಯೋಧರನ್ನು ಸ್ಮರಿಸುವ, ಕಾರ್ಗಿಲ್ ಗೆಲುವು ಆಧಾರಿತ ಮನೋಜ್ಞ ನೃತ್ಯ ರೂಪಕ ಗಮನ ಸೆಳೆಯಿತು.




.jpg)
.jpg)
.jpg)
