ಕಾಸರಗೋಡು: ಬಹಳ ದಿವಸಗಳ ನಂತರ ಬೋವಿಕ್ಕಾಣ ಆಸುಪಾಸಿನ ಬಾವಿಕೆರೆಯಲ್ಲಿ ಚಿರತೆ ಕಾಣಿಸಿಕೊಂಡಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.ಬಾವಿಕೆರೆ ನಿವಾಸಿ ಸಿಂಧು ಎಂಬವರ ಮನೆಯ ಸಾಕುನಾಯಿಯೊಂದು ಕರುಳು ಬಗೆದುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಚಿರತೆ ಕೊಂದುಹಾಕಿರುವುದಾಗಿ ಸಂಶಯಿಸಲಾಗಿದೆ. ದೊಡ್ಡ ಗಾತ್ರದ ನಾಯಿ ಇದಾಗಿರುವುದರಿಂದ ಎತ್ತಿಕೊಂಡು ಹೋಗಲು ಸಾಧ್ಯವಾಗದೆ ಅರ್ಧದಲ್ಲಿ ಬಿಟ್ಟುಹೋಗಿರಬೇಕೆಂದು ಸಂಶಯಿಸಲಾಗಿದೆ. ಆಸುಪಾಸಿನಲ್ಲಿ ಚಿರತೆಯದ್ದೆನ್ನಲಾದ ಪಂಜದ ಗುರುತು ಪತ್ತೆಹಚ್ಚಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆ ನಾಯಿಯನ್ನು ಕೊಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪೆಬ್ರವರಿ ತಿಂಗಳಲ್ಲಿ ಕೊಳತ್ತೂರು ಪ್ರದೇಶದಿಂದ ಬೋನು ಇರಿಸಿ ಎರಡು ಚಿರತೆಗಳನ್ನು ಸೆರೆಹಿಡಿಯಲಾಗಿತ್ತು.




