ಮಂಜೇಶ್ವರ: ಭಾಷೆ, ಗಡಿಗಳನ್ನು ದಾಟಿ ಸಾಹಿತ್ಯ-ಸಂಸ್ಕøತಿಗಳು ಮೇಳೈಸಿದಾಗ ಸುಶಿಕ್ಷಿತ ವ್ಯವಸ್ಥೆಯೊಂದು ಹುಟ್ಟಿಕೊಳ್ಳುತ್ತದೆ. ಒಡೆದು ಬಡಿದಾಡುವ ವ್ಯವಸ್ಥೆಗೆ ಅಕ್ಷರ ರೂಪದಲ್ಲಿ ಬರೆದು ಬೆಸೆಯುವ ಸಂಸ್ಕøತಿಯೊಂದು ಈ ಮೂಲಕ ರೂಪುಗೊಂಡಾಗ ಮಾನವರಾಗಲು ಸಾಧ್ಯ. ಕಾವ್ಯ ಸಂಸ್ಕøತಿ ಯಾನ ಕಾರ್ಯಕ್ರಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನಿವಾಸದಲ್ಲಿ ಆಯೋಜಿಸಿದ್ದು, ಸಕಾಲಿಕವಾಗಿ ಸಾಹಿತ್ಯ ಚರಿತ್ರೆಗೆ ಹೊಸ ಭಾಷ್ಯ ಬರೆದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದ ರಾಜ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ರಂಗಮಂಡಲ ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ಭಾನುವಾರ ಗಿಳಿವಿಂಡು ಆವರಣದಲ್ಲಿ ನಡೆದ ಕಾವ್ಯ ಸಂಸ್ಕøತಿ ಯಾನ 11 ನೇ ಕವಿಗೋಷ್ಠಿ ಸಮಾರಂಭದ ಸಂಜೆ ನಡೆದ ಸಮಾರೋಪ ನುಡಿಗಳನ್ನಾಡಿ ಅವರು ಮಾತನಾಡಿದರು.
ನಮ್ಮದಲ್ಲದ ಸಂಸ್ಕøತಿಯನ್ನು ಈ ನೆಲಕ್ಕೆ ಅಂಟಿಸುವ ಹುನ್ನಾರಗಳಿಗೆ ಎದುರಾಗಿ ಲೇಖನಿಗಳು ಮಾತನಾಡಬೇಕು. ಪ್ರೀತಿ-ಪ್ರೇಮಗಳ ಆವರಣಗಳಿಂದ ಕಾವ್ಯಗಳು ಹೊರಬಂದು ವರ್ತಮಾನದ ಜನಸಾಮಾನ್ಯರು ಎದುರಿಸುವ ಡಳ್ಳುರಿಗಳಿಗೆ ಕಾವ್ಯ ಧ್ವನಿಯಾಗಬೇಕು ಎಂದವರು ತಿಳಿಸಿದರು.
ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕಾವ್ಯ ಸಂಸ್ಕøತಿ ಯಾನದ ಸರ್ವಾಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಗೌರವ ಉಪಸ್ಥಿತರಿದ್ದರು. ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವೀನ ಮೊಂತೇರೊ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶಿವಶಂಕರ್ ಮುಖ್ಯ ಅತಿಥಿಗಳಾಗಿದ್ದರು. ಗೋವಿಂದ ಪೈ ಸ್ಮಾರಕ ಸಮಿತಿ ಸದಸ್ಯ ವಾಸುದೇವ, ಯಕ್ಷಗಾನ ಕಲಾವಿದ ನರಸಿಂಹ ಬಲ್ಲಾಳ್, ಡಾ.ಎಚ್.ಆರ್.ಸ್ವಾಮಿ, ಡಾ.ಪದ್ಮಾ ಶೈಲೇಂದ್ರ ಬಂದಗದ್ದೆ, ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಮೇಶ ಎಂ.ಸಾಲಿಯಾನ್ ಉಪಸ್ಥಿತರಿದ್ದರು. ಕಮಲಾಕ್ಷ ಡಿ.ಸ್ವಾಗತಿಸಿ, ಕಮಲಾಕ್ಷ ಕನಿಲ ವಂದಿಸಿದರು. ಸಂತೋಷ್ ಕುಮಾರ್ ಕೆ. ನಿರೂಪಿಸಿದರು.




.jpg)
.jpg)
