ಕಾಸರಗೋಡು: ಪಡನ್ನಕ್ಕಾಡ್ ತೀರ್ಥಂಕರ ಎಂಬಲ್ಲಿ ಶೆಡ್ಡಿನೊಳಗೆ ದಾಸ್ತಾನಿರಿಸಿದ್ದ 200 ತೆಂಗಿನ ಕಾಯಿ ಕಳವುಗೈದಿರುವ ಇಬ್ಬರನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೀರ್ಥಂಕರ ಕನ್ನಿಚ್ಚಿರ ನಿವಾಸಿಗಳಾದ ಕೆ. ರಾಜೇಶ್ ಹಾಗೂ ಕೆ. ರತೀಶ್ ಬಂಧಿತರು. ಕಳವುಗೈದ ತೆಂಗಿನಕಾಯಿಗಳನ್ನು ಮಾರಾಟ ಮಾಡಿದ್ದು, ಪೊಲೀಸರು ತನಿಖೆ ನಡೆಸುವ ಮಧ್ಯೆ ತೆಂಗಿನಕಾಯಿ ಖರೀದಿ ಅಂಗಡಿ ಮಾಲಿಕರನ್ನು ವಿಚಾರಿಸಿದಾಗ ಮಾಹಿತಿ ಲಭಿಸಿತ್ತು. ಮಳೆನೀರಿನಲ್ಲಿ ಲಭಿಸಿದ ತೆಂಗಿನಕಾಯಿ ಇದಾಗಿದೆ ಎಂದು ಅಂಗಡಿಮಾಲಿಕನಲ್ಲಿ ತಿಳಿಸಿ ಇವರಿಬ್ಬರೂ ತೆಂಗಿನಕಾಯಿ ಮಾರಾಟ ಮಾಡಿದ್ದರು. ಯೆಂಗಿನಕಾಯಿ ಧಾರಣೆ ಹೆಚ್ಚಾಗುತ್ತಿದ್ದಂತೆ, ತೆಂಗಿನಕಾಯಿ ಕಳವು ಪ್ರಕರಣವೂ ಹೆಚ್ಚಾಗುತ್ತಿರುವುದು ಕೃಷಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

