ಬದಿಯಡ್ಕ : ವೈದ್ಯರ ದಿನಾಚರಣೆ ಅಂಗವಾಗಿ ಬದಿಯಡ್ಕ ಗ್ರಾ.ಪಂ. ನ ನೇತೃತ್ವದಲ್ಲಿ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಅರ್ಜುನ್ ಮತ್ತು ಡಾ.ಗಾಯತ್ರಿ ಅವರನ್ನು ಬದಿಯಡ್ಕ ಗ್ರಾಮ ಪಂ ಅಧ್ಯಕ್ಷೆ ಶಾಂತಾ ಬಿ.ನಿನ್ನೆ ಶಾಲು ಹೊದೆಸಿ ಸನ್ಮಾನಿಸಿದರು.
ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ, ಪಂಚಾಯಿತಿ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ನಿವೃತ್ತ ಶಿಕ್ಷಕ ಚಂದ್ರಹಾಸ ನಂಬಿಯಾರ್, ಲೋಹಿತಾಕ್ಷನ್ ನಾಯರ್, ವಿನ್ಸೆಂಟ್, ಬಲ್ತೀಸ್ ಮತ್ತಿತರರು ಉಪಸ್ಥಿತರಿದ್ದರು.





