ತಿರುವನಂತಪುರಂ: ತಿರುವನಂತಪುರದಲ್ಲಿ ಶಶಿ ತರೂರ್ ಅವರಿಗೆ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಕೆ. ಮುರಳೀಧರನ್ ಹೇಳಿದ್ದಾರೆ. ತರೂರ್ ಅವರ ವಿಷಯವನ್ನು ಕೈಬಿಡಲಾಗಿದೆ ಎಂದಿರುವರು.
ನಿರಂತರವಾಗಿ ಪಕ್ಷಕ್ಕೆ ಇರಿಸುಮುರುಸು ತರುತ್ತಿರುವ ಅವರನ್ನು ಗುಂಪಿನಲ್ಲಿ ಸೇರಿಸಲಾಗದು. ಕ್ರಮ ಅಗತ್ಯವಿದೆಯೇ ಎಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕೆ. ಮುರಳೀಧರನ್ ತಿರುವನಂತಪುರದಲ್ಲಿ ಹೇಳಿದ್ದಾರೆ.





