HEALTH TIPS

ವಾಟ್ಸ್‌ಆಯಪ್​ನಲ್ಲಿ ಬ್ಲೂ ಟಿಕ್ ಪಡೆಯುವುದು ಹೇಗೆ?: ಜಸ್ಟ್ ಹೀಗೆ ಮಾಡಿ ಸಾಕು

ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ವಾಟ್ಸ್​ಆಯಪ್​ನಲ್ಲೂ (WhatsApp) ಬ್ಲೂ ಟಿಕ್ ಲಭ್ಯವಿದೆ ಅಂತ ನಿಮಗೆ ಗೊತ್ತಾ?. ಬ್ಲೂ ಟಿಕ್ ಅಂದ್ರೆ ಪ್ಲಾಟ್ ಫಾರ್ಮ್ ಆ ವ್ಯಕ್ತಿಯ ಖಾತೆಯನ್ನು ಪರಿಶೀಲಿಸಿದೆ ಎಂದು ಅರ್ಥ. ಇಂದು ನಾವು ನಿಮಗೆ ವಾಟ್ಸ್​ಆಯಪ್​ನಲ್ಲಿ ಬ್ಲೂ ಟಿಕ್ ಯಾರಿಗೆ ಸಿಗುತ್ತದೆ ಮತ್ತು ಅದನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿ ನೀಡುತ್ತೇವೆ.

ಫೇಸ್ ಬುಕ್, ಎಕ್ಸ್ ಮತ್ತು ಇನ್ಸ್ಟಾಗ್ರಾಮ್ ನಂತಹ ಜನಪ್ರಿಯ ಪ್ಲಾಟ್ ಫಾರ್ಮ್ ಗಳಲ್ಲಿ ಜನರಿಗೆ ಬ್ಲೂ ಟಿಕ್ ಬಂದಿರುವುದನ್ನು ನೀವು ನೋಡಿರಬೇಕು, ಆದರೆ ವಾಟ್ಸ್​ಆಯಪ್​ನಲ್ಲಿ ಬ್ಲೂ ಟಿಕ್​ಗೆ ಇರುವ ಷರತ್ತುಗಳು ಏನು ಮತ್ತು ಇತರ ಪ್ಲಾಟ್ ಫಾರ್ಮ್ ಗಳಿಗೆ ಹೋಲಿಸಿದರೆ ಹೇಗೆ ಭಿನ್ನವಾಗಿದೆ ಎಂಬುದನ್ನು ನೋಡೋಣ.

ಯಾರಿಗೆ ಬ್ಲೂ ಟಿಕ್ ಸಿಗುತ್ತದೆ?

ನೀಲಿ ಟಿಕ್ ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳುವುದಕ್ಕಿಂತ ಅದು ಯಾರಿಗೆ ಸಿಗುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯ. ವಾಟ್ಸ್​ಆಯಪ್​ ಬ್ಯುಸಿನೆಸ್ ಅಕೌಂಟ್ ಹೊಂದಿರುವವರಿಗೆ ಮಾತ್ರ ನೀಲಿ ಟಿಕ್ ಸೌಲಭ್ಯವನ್ನು ಒದಗಿಸುತ್ತದೆ. ಪರಿಶೀಲಿಸಿದ ಬ್ಯಾಡ್ಜ್ ಎಂದರೆ ವಾಟ್ಸ್​ಆಯಪ್​ನಲ್ಲಿನ ಚಟುವಟಿಕೆ ಮತ್ತು ಒದಗಿಸಲಾದ ದಾಖಲೆಗಳ ಆಧಾರದ ಮೇಲೆ ಖಾತೆಯನ್ನು ಪರಿಶೀಲಿಸಲಾಗಿದೆ ಎಂದರ್ಥ. ಮೆಟಾ ವೆರಿಫೈಡ್ ಎನ್ನುವುದು ಪಾವತಿಸಿದ ಮಾಸಿಕ ಚಂದಾದಾರಿಕೆಯಾಗಿದ್ದು, ಇದು ಪರಿಶೀಲಿಸಿದ ಬ್ಯಾಡ್ಜ್, ಖಾತೆ ಬೆಂಬಲ, ಖಾತೆ ರಕ್ಷಣೆಯಂತಹ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ದೊಡ್ಡ ವ್ಯವಹಾರಗಳು: ಬ್ಯಾಂಕ್‌ಗಳು, ಇ-ಕಾಮರ್ಸ್ ಕಂಪನಿಗಳು ಇತ್ಯಾದಿಗಳಂತಹ ವಾಟ್ಸ್​ಆಯಪ್​ನಲ್ಲಿ ವ್ಯವಹಾರ ಮಾಡುವ ದೊಡ್ಡ ಕಂಪನಿಗಳಿಗೆ ಇದು ಸಿಗುತ್ತದೆ.

ದೊಡ್ಡ ಚಾನೆಲ್‌ಗಳು: ಸುದ್ದಿ ಚಾನೆಲ್‌ಗಳು, ಸೆಲೆಬ್ರಿಟಿ ಖಾತೆಗಳು ಇತ್ಯಾದಿಗಳಂತಹ ಹೆಚ್ಚಿನ ಫಾಲೋವರ್ಸ್ ಹೊಂದಿರುವ ಚಾನೆಲ್‌ಗಳು.

ಸರ್ಕಾರಿ ಸಂಸ್ಥೆಗಳು: ಸರ್ಕಾರದ ವಿವಿಧ ಇಲಾಖೆಗಳು ಮತ್ತು ಯೋಜನೆಗಳು ಸಹ ನೀಲಿ ಟಿಕ್ ಅನ್ನು ಬಳಸಬಹುದು.

ಪರಿಶೀಲಿಸಿದ ಬ್ಯಾಡ್ಜ್ ಎಲ್ಲಿ ಕಾಣಿಸಿಕೊಳ್ಳುತ್ತದೆ?

  • ಕಾಲ್ ಟ್ಯಾಬ್
  • ಬ್ಯುಸಿನೆಸ್ ಪ್ರೊಫೈಲ್
  • ಒಕಾಶ್ಯನ್ ಕಾರ್ಡ್
  • ಚಾಟ್‌ಗಳು
  • ಬ್ಯುಸಿನೆಸ್ ಖಾತೆಗಳಿಂದ ಒಳಬರುವ ಕರೆಗಳ ಸಮಯದಲ್ಲಿ

ವಾಟ್ಸ್​​ಆಯಪ್​​ನಲ್ಲಿ ಬ್ಲೂ ಟಿಕ್ ಗೆ ಅರ್ಜಿ ಸಲ್ಲಿಸುವುದು ಹೇಗೆ?:

  • ಮೊದಲು ವಾಟ್ಸ್​​ಆಯಪ್​​ ಬ್ಯುಸಿನೆಸ್ ಆಪ್ ತೆರೆಯಿರಿ.
  • ಆಂಡ್ರಾಯ್ಡ್ ಬಳಕೆದಾರರು ಬಲಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ, ನಂತರ ಸೆಟ್ಟಿಂಗ್ಸ್ ಮೇಲೆ ಟ್ಯಾಪ್ ಮಾಡಬಹುದು. ಅಂತೆಯೆ, iOS ಬಳಕೆದಾರರು ಡಿಸ್​ಪ್ಲೇಯ ಕೆಳಗಿನ ಬಲಭಾಗದಲ್ಲಿ ಸೆಟ್ಟಿಂಗ್ಸ್ ಟ್ಯಾಬ್ ಅನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.
  • ಇದಾದ ನಂತರ ಟೂಲ್ಸ್​ಗೆ ಹೋಗಿ ಮತ್ತು ಮೆಟಾ ವೆರಿಫೈಡ್ ಮೇಲೆ ಕ್ಲಿಕ್ ಮಾಡಿ.
  • ಮೆಟಾ ವೆರಿಫೈಡ್ ಆಯ್ಕೆಯನ್ನು ಆರಿಸಿದ ನಂತರ, ಚಂದಾದಾರಿಕೆ ಪ್ಯಾಕೇಜ್ ಅನ್ನು ಆರಿಸಿ ಮತ್ತು ನಂತರ ಪಾವತಿ ಮಾಡಿ.

ಬ್ಲೂ ಟಿಕ್‌ಗೆ ಎಷ್ಟು ಹಣವನ್ನು ಪಾವತಿಸಬೇಕಾಗುತ್ತದೆ?

ಮಾಧ್ಯಮ ವರದಿಗಳ ಪ್ರಕಾರ, ನೀಲಿ ಟಿಕ್‌ಗಾಗಿ ನೀವು 639 ರಿಂದ 18900 ರೂ. ಗಳವರೆಗೆ ಪಾವತಿಸಬೇಕಾಗಬಹುದು, ಏಕೆಂದರೆ ನೀಲಿ ಟಿಕ್‌ಗಾಗಿ ವಿಭಿನ್ನ ಪ್ಯಾಕೇಜ್‌ಗಳು ಲಭ್ಯವಿದೆ. ನೀಲಿ ಟಿಕ್ ಅನ್ನು ಪರಿಚಯಿಸುವುದರಿಂದ ವಂಚಕರು ನಕಲಿ ಖಾತೆಗಳನ್ನು ರಚಿಸುವುದು ಮತ್ತು ಜನರನ್ನು ದಾರಿ ತಪ್ಪಿಸುವುದು ಕಷ್ಟವಾಗಿದೆ. ಈ ಖಾತೆಯು ನಿಜವಾಗಿದ್ದು, ವಾಟ್ಸ್​ಆಯಪ್​ನಿಂದ ಪರಿಶೀಲಿಸಲ್ಪಟ್ಟಿದೆ ಎಂಬುದಕ್ಕೆ ನೀಲಿ ಟಿಕ್ ಒಂದು ರೀತಿಯ ಪುರಾವೆಯಾಗಿದೆ. ಇದು ಬಳಕೆದಾರರಿಗೆ ಒಂದು ಖಾತೆಯನ್ನು ನಂಬಲು ಸುಲಭವಾಗುತ್ತದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries