ಕುಂಬಳೆ: ಕೀರ್ತನ ಕುಟೀರ ಅನಂತಪುರದ ಆಶ್ರಯದಲ್ಲಿ 15ನೇ ವರ್ಷದ ಹರಿಕೀರ್ತನ ಮಹೋತ್ಸವ ಹಾಗೂ ಸಪ್ತಾಹ ಆ.18 ರಿಂದ 24ರ ವರೆಗೆ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ಆ.18 ರಂದು ಸಂಜೆ 4.30 ರಿಂದ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕಣಿಪುರ ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಕೆ.ಕೇಶವ ಅಡಿಗ ದೀಪ ಬೆಳಗಿಸಿ ಉದ್ಘಾಟಿಸುವರು. ಧಾರ್ಮಿಕ ಮುಂದಾಳು ದಯಾನಂದ ರಾವ್ ಅಧ್ಯಕ್ಷತೆ ವಹಿಸುವರು. ಕಲಾರತ್ನ ಶಂ.ನಾ.ಅಡಿಗ ಪ್ರಾಸ್ತಾವಿಕವಾಗಿ ಮಾತನಾಡುವರು. ಶ್ರೀಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ದಯಾರಾಜ್, ವಕೀಲ ಸತ್ಯನಾರಾಯಣ ತಂತ್ರಿ, ಧಾರ್ಮಿಕ ಮುಂದಾಳು ಕೆ.ಸಿ.ಮೋಹನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಬಳಿಕ 5.30 ರಿಂದ ಪ್ರಣಮ್ಯ, ಸುಶ್ಮಿತಾ ಆಚಾರ್ಯ, ಮೃದುಲ ಹಾಗೂ ಪೂಜಾ ವಾಸುದೇವನ್ ಐಲ ಅವರಿಂದ ಹರಿಕಥಾ ಸಂಕೀರ್ತನೆ ನಡೆಯಲಿದೆ.
ಆ.19 ರಂದು ಸಂಜೆ 4.30ರಿಂದ ಭಜನೆ, 5 ರಿಂದ ರಾಮನಾಥ ನಾಯಕ್, ಅಪರ್ಣಾ, ಶರಣ್ಯ ಕುಂಟಾರು, ಗಾಯತ್ರೀ ಕೊಂಡೆವೂರು, ವಿಜಯಲಕ್ಷ್ಮೀ ಶಂ.ನಾ.ಅಡಿಗ ಅವರಿಂದ ಸಂಕೀರ್ತನೆ ನಡೆಯಲಿದೆ.
ಆ.20 ರಂದು ಸಂಜೆ 5 ರಿಂದ ಐಶ್ವರ್ಯಾ ಪೈ, ಸರೋಜಿನಿ ಮೊಳೆಯಾರ್, ಲೇಖನ ಐಲ, ಕೃತ್ತಿಕಾ ಆಚಾರ್ಯರಿಂದ, ಆ.21 ರಂದು ಸಂಜೆ 5 ರಿಂದ ಚಂದ್ರಾವತಿ ವರ್ಕಾಡಿ, ನವೀನ್ ಕುಮಾರ್ ಶರ್ಮಾ, ಲೇಖನ್ ಆಳ್ವ ನಾವೂರು, ಅಝಿಜ್ಞಾ ಭಟ್ ಬೊಳುಂಬು, ಧನ್ಯಶ್ರೀ ನಂದನ್ ಪಡಾರು ಅವರಿಂದ, 22 ರಂದು ಸಂಜೆ 5 ರಿಂದ ಧ್ಯೇಯ ವರ್ಕಾಡಿ, ಚೈತ್ರ ಬೆದ್ರಡ್ಕ, ನಿಶ್ಚಿತ ಅಡೂರು, ವಿದುಷಿಃ ವೈಭವಿ ಶಂ.ನಾ.ಅಡಿಗ ಅವರಿಂದ, 23 ರಂದು ಸಂಜೆ 5 ರಿಂದ ಧ್ಯೇಯಶ್ರೀ, ಲಕ್ಷ್ಮೀ ಶೆಣೈ, ಭಾವನಾ ನಾಯಕ್, ಶಾಂಭವಿ ಪ್ರಾಣೇಶ್ ಅವರಿಂದ ನಡೆಯಲಿದೆ.
ಆ.24 ರಂದು ಬೆಳಿಗ್ಗೆ 9 ರಿಂದ ಭಜನೆ, 9.30 ರಿಂದ ಶೋಭನ ವಾಲ್ತಾಜೆ, ಶಾಂತಾ ನಾಗರಾಜ ಭಟ್, ಶಶಿಕಲಾ ಕೊೈಲ, ಶಾಲಿನಿ ಪ್ರಸಾದ್ ಮೂಡಬಿದ್ರೆ, ಯಕ್ಷಿತ, ದೇವಿಕಾ ಕುಂಟಾರ್, ಶ್ರಾವಣ್ಯ ಕೊಂಡೆವೂರು ಅವರಿಂದ ಹರಿಕಥಾ ಸಂಕೀರ್ತನೆ ನಡೆಯಲಿದೆ.ಮಧ್ಯಾಹ್ನ 2 ರಿಂದ ಶ್ರೀನಿಕೇತ್ ಬಿ.ಎಲ್ ಬೆಂಗಳೂರು, ಅನಿರುದ್ಧ ಕಾರ್ಕಳ, ಮೈತ್ರಿ ಎಂ ಉಜಿರೆ ಅವರ ಹರಿಕಥಾ ರಂಗಪ್ರವೇಶ ನಡೆಯಲಿದೆ.ಸಂಜೆ 4 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 5.30ರಿಂದ ಕಲಾರತ್ನ ಶಂನಾ.ಅಡಿಗರಿಂದ ಹರಿಕಥಾ ಸಂಕೀರ್ತನೆ ರುಕ್ಮಿಣೀ ಕಲ್ಯಾಣ ಪ್ರಸ್ತುತಿಗೊಳ್ಳಲಿದೆ. ಬಳಿಕ ಮಂಗಲಾಚರಣೆಯೊಂದಿಗೆ ಸಪ್ತಾಹ ಮುಕ್ತಾಯಗೊಳ್ಳುವುದು.




