ಬದಿಯಡ್ಕ : ಕೇರಳ ಸ್ಟೇಟ್ ರೂಟ್ರೋನಿಕ್ಸ್ ಇದರ ಬೇಸಿಗೆ ಕಾಲದ ಕಂಪ್ಯೂಟರ್ ತರಬೇತಿಯ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಬದಿಯಡ್ಕದಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕವಿ, ಸಾಹಿತಿ ದಯಾನಂದ ರೈ ಕಳುವಾಜೆ ಮಾತನಾಡಿ, ಸಾಮೂಹಿಕ ಮಾಧ್ಯಮದ ಅನಗತ್ಯ ಬಳಕೆಯಿಂದ ಮಕ್ಕಳು ಹಾದಿ ತಪ್ಪುವ ಸಾಧ್ಯತೆ ಹೆಚ್ಚಾಗಿದೆ, ಆದಷ್ಟು ವೈಜ್ಞಾನಿಕವಾದ ವಿಷಯಕ್ಕೆ ಪ್ರಾಧಾನ್ಯತೆ ನೀಡಬೇಕು. ಹೆತ್ತವರು ಇದನ್ನು ಹೆಚ್ಚು ಗಮನದಲ್ಲಿಟ್ಟು ಪ್ರಯೋಜನಕರವಾಗುವ ವಿಷಯಗಳನ್ನು ತಿಳಿಯಪಡಿಸುವ ಜವಾಬ್ದಾರಿಯಿದೆ ಎಂದರು. ಅಕಾಡೆಮಿಯ ನಿರ್ದೇಶಕ ಕಿಶೋರ್ ಅಧ್ಯಕ್ಷತೆ ವಹಿಸಿದ್ದರು. ಚೈತ್ರಿಕ ವಂದಿಸಿದರು.




.jpg)
